ಕಾಸರಗೋಡು: ನಗರಸಭೆ ವ್ಯಾಪ್ತಿಯಲ್ಲಿ ಅನಧಿಕ್ರತವಗಿ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್‍ಗಳ ತೆರವುಕಾರ್ಯಾಚರಣೆಗೆ ಗುರುವಾರ ನಗರಸಭೆ ಚಾಲನೆ ನೀಡಿದೆ. ಅನಧಿಕೃತ ಬ್ಯಾನರ್-ಫ್ಲೆಕ್ಸ್ ಅಳವಡಿಸಿವರೇ ಇದನ್ನು ತೆರವುಗೊಳಿಸುವಂತೆ ನಗರಸಭೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ, ಸಂಬಂಧಪಟ್ಟವರು ಯಾರೂ ತೆರವಿಗೆ ಮುಂದಾಗದಿದ್ದಾಗ ನಗರಸಭೆ ಖುದ್ದಾಗಿ ತೆರವುಕಾರ್ಯಾಚರಣೆಗೆ ಮುಂದಾಗಿದೆ. ಮೊದಲ ಹಂತವಾಗಿ ಕಾಸರಗೋಡು ಎಂ.ಜಿ ರಸ್ತೆಯುದ್ದಕ್ಕೂ ಅಳವಡಿಸಿದ್ದ ಪ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಯಿತು.
ಕಾರ್ಯಾಚರಣೆಗೆ ಪೊಲೀಸರೂ ಸಹಕರಿಸಿದರು. ನಗರಸಭಾ ರೆವೆನ್ಯೂ ಇನ್ಸ್‍ಪೆಕ್ಟರ್ ನಾರಾಯಣ ನಾಯ್ಕ್, ರೆವೆನ್ಯೂ ಅಧಿಕಾರಿ ಕೆ.ಪಿ ಜಾರ್ಜ್, ಹೆಲ್ತ್ ಇನ್ಸ್‍ಪೆಕ್ಟರ್ ಎಂ.ಪಿ ರಆಜೇಶ್, ಜ್ಯೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಟಿ.ಪಿ ರಊಪೇಶ್, ಸಿಮಿಲೇಶ್ ಕುಮಾರ್ ಕಾರ್ಯಾಚರನೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ಕಾರ್ಯಾಚರಣೆಯಲ್ಲಿ ನಗರದ ವಿವಿಧೆಡೆ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಮುಂದುವರಿಯಲಿದೆ. ನಗರಸಭೆ ಆದೇಶ ನೀಡಿದ್ದರೂ, ಫ್ಲೆಕ್ಸ್ ತೆರವುಗೊಳಿಸದ ಸಂಸ್ಥೆಗಳ ವಿರುದ್ಧ ದಂಡ ವಸೂಲಿ ಸೇರಿದಂತೆ ಇತರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಅಂಚಿಗೆ ಅನಧಿಕೃತ ಫ್ಲೆಕ್ಸ್, ಬ್ಯಾನರ್: ನಗರಸಭೆಯಿಂದ ತೆರವು
0
ಜನವರಿ 19, 2023
Tags


