ಕಾಸರಗೋಡು: ಮುಸ್ಲಿಂಲೀಗ್ ಮುಖಂಡ, ನಗರಸಭಾ ಮಾಜಿ ಅಧ್ಯಕ್ಷ ಸಂಯುಕ್ತ ಮುಸ್ಲಿಂ ಜಮಾತ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ.ಇ. ಅಬ್ದುಲ್ಲಾ ಸಮಾಜಸೇವೆಯ ಮೂಲಕ ಕರ್ಮಯೋಗಿಯಾಗಿ ಸೇವೆ ಮುಡಿಪಾಗಿರಿಸಿದ್ದರು ಎಂದು ಸಂಯುಕ್ತ ಖಾಸಿ, ಪ್ರಾಧ್ಯಾಪಕ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ತಿಳಿಸಿದ್ದಾರೆ.
ಅವರು ಸಂಯುಕ್ತ ಜಮಾತ್ ಮಲಿಕ್ ದಿನಾರ್ ಇಸ್ಲಾಮಿಕ್ ಅಕಾಡೆಮಿ ವತಿಯಿಂದ ಟಿ.ಇ. ಅಬ್ದುಲ್ಲಾ ಸಂಸ್ಮರಣೆ ಮತ್ತು ಪ್ರಾರ್ಥನಾ ಕೂಟ ಉದ್ಘಾಟಿಸಿ ಮಾತನಾಡಿದರು. ಶಾಸಕ ಎನ್. ಎ. ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಮಲಿಕ್ ದಿನಾರ್ ಜುಮಾತ್ ಖತೀಬ್ ಕೆ.ಎಂ. ಅಬ್ದುಲ್ ಮಜೀದ್ ಬಾಖವಿ ಸಂಸ್ಮರಣಾ ಉಪನ್ಯಾಸ ನೀಡಿದರು. ಎನ್. ಎ. ಅಬೂಬಕರ್ ಹಾಜಿ, ಯಾಹ್ಯಾ ತಳಂಗರೆ, ಎ. ಅಬ್ದುಲ್ ರಹ್ಮಾನ್, ಮೊಯ್ದೀನ್ ಕೊಲ್ಲಂಪಾಡಿ, ಸಿದ್ದೀಕ್ ಚೇರೂರ್, ಪಿ.ಎಂ. ಮುನೀರ್ ಹಾಜಿ, ಎಂ.ಎ. ಮಜೀದ್ ಪಟ್ಲ, ಮಾಹಿನ್ ಕೇಳೋಟ್, ಎ.ಬಿ. ಶಾಫಿ, ಪಿ.ಕೆ. ಅಶ್ರಫ್, ಸಹದ್ ಉಳಿಯತ್ತಡ್ಕ ಹಾಗೂ ಹಸೈನಾರ್ ತಳಂಗರೆ, ಸಮಿತಿ ಸದಸ್ಯರು, ಜಮಾತ್ ಪ್ರತಿನಿಧಿಗಳು, ಖತೀಬರು, ಮಲಿಕ್ ದಿನಾರ್ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.
ನಗರಸಭಾ ಮಾಜಿ ಅಧ್ಯಕ್ಷ ಟಿ.ಇ ಅಬ್ದುಲ್ಲ ಸಂಸ್ಮರಣಾ ಸಮಾರಂಭ
0
ಫೆಬ್ರವರಿ 27, 2023


