ಮುಳ್ಳೇರಿಯ: ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ಮಂದಿರದ ಸೇವಾಸಮಿತಿ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರದ 'ಭಾರತಿ ಸದನ' ಸಭಾಭವನದಲ್ಲಿ ಜರಗಿತು.
ಸಭೆಯಲ್ಲಿ ಸಂಸ್ಕøತ ಭಾರತಿ ಕಾಸರಗೋಡು ಜಿಲ್ಲಾ ಸಂಯೋಜಕ ಮಂಜುನಾಥ ಉಡುಪ ಉಪಸ್ಥಿತರಿದ್ದು ಪ್ರಧಾನ ಭಾಷಣ ಮಾಡಿದರು. ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕಡಂಬಳಿತ್ತಾಯ, ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದ ಸೇವಾಸಮಿತಿ ಅಧ್ಯಕ್ಷ ಗಂಗಾಧರ ಬಳ್ಳಾಲ್ ಅಡ್ವಳ, ಕೋಳಿಕ್ಕಾಲ್ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಸೇವಾಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಲ್, ಹಿರಿಯರಾದ ಗೋಪಾಲ ಮಣಿಯಾಣಿ ಚಲ್ಲಂತಡ್ಕ, ಗೋಸಾಡ ಶ್ರೀ ಮಹಿಷಮರ್ಧಿನೀ ಕ್ಷೇತ್ರದ ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಪ್ರಮುಖರಾದ ಐತಪ್ಪ ಮವ್ವಾರು, ಯಶೋದಾ ಎನ್, ಡಾ.ರತ್ನಾಕರ ಮಲ್ಲಮೂಲೆ, ರಾಜೇಂದ್ರ ಪ್ರಸಾದ್ ಬಲೆಕ್ಕಳ, ಕೇಶವ ಕೋಳಿಕ್ಕಾಲ್,ಚಂದು ಮಾಸ್ತರ್ ಮುಳ್ಳೇರಿಯ, ದೇವಾನಂದ ಮಾಸ್ತರ್ , ರವೀಂದ್ರ ರೈ ಮಲ್ಲಾವರ, ಶ್ರೀ ಭಾರತಾಂಬಾ ಭಜನಾ ಮಂದಿರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ರೈ ಬಲೆಕ್ಕಳ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರೂಪೀಕರಿಸಲಾಯಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು(ರಕ್ಷಾಧಿಕಾರಿಗಳು),ಸುಬ್ರಹ್ಮಣ್ಯ ಕಡಂಬಳಿತ್ತಾಯ, ಗಣೇಶ್ ವತ್ಸ ನೆಕ್ರಾಜೆ, ಎ ಬಿ ರಘುರಾಮ ಬಳ್ಳಾಲ್ ಕಾರಡ್ಕ, ಗೋಪಾಲ ಮಣಿಯಾಣಿ ಚಲ್ಲಂತಡ್ಕ, ಐತಪ್ಪ ಮವ್ವಾರು, ಭಾಸ್ಕರ ಮಣಿಯಾಣಿ ಕೋಳಿಕ್ಕಾಲ್, ದೇವಾನಂದ ರೈ ಕಾನಕ್ಕೋಡು, ಕೃಷ್ಣಯ್ಯ ಬಲ್ಲಾಳ್ ನಾಟೆಕಲ್ಲು(ಗೌರವ ಸಲಹೆಗಾರರು), ಎಂ ಸಂಜೀವ ಶೆಟ್ಟಿ(ಗೌರವಾಧ್ಯಕ್ಷ), ಗಂಗಾಧರ ಬಳ್ಲಾಲ್ ಅಡ್ವಳ(ಅಧ್ಯಕ್ಷ), ಯತೀಶ್ ಕುಮಾರ್ ರೈ ಮುಳ್ಳೇರಿಯ(ಪ್ರ.ಕಾರ್ಯದರ್ಶಿ), ದಾಮೋದರ ಎ. ಗಾಡಿಗುಡ್ಡೆ(ಖಜಾಂಜಿ), ರಘುನಂದನ ಭಟ್ ಬಲೆಕ್ಕಳ, ಶ್ರೀಷ ಭಟ್ ಕಾನಕ್ಕೋಡು, ಗಣೇಶ್ ಭಟ್ ಪೈಕೆ, ಹರಿ ನಾರಾಯಣ ಮಾಸ್ತರ್ ಅಗಲ್ಪಾಡಿ, ರಾಜೇಂದ್ರ ಪ್ರಸಾದ್ ಬಲೆಕ್ಕಳ, ರಮಾನಾಥ್ ರಾವ್ ಮುಳ್ಳೇರಿಯ (ಎ ಆರ್ ಆರ್), ರವೀಂದ್ರ ರೈ ಗೋಸಾಡ, ಚಂದು ಮಾಸ್ತರ್ ಮುಳ್ಳೇರಿಯ, ಕೇಶವ ಕೋಳಿಕ್ಕಾಲ್,ವಸಂತ ಕೆ ಮುಳ್ಳೇರಿಯ, ಕರುಣಾಕರ ರೈ ಕಾನಕ್ಕೋಡು, ಸುರೇಶ್ ದೇಲಂಪಾಡಿ, ಸುಧಾಮ ಗೋಸಾಡ, ಚಂದ್ರಶೇಖರ ಗಾಡಿಗುಡ್ಡೆ ಮೂಲೆ, ಸುಧೀರ್ ಕುಮಾರ್ ರೈ ಗಾಡಿಗುಡ್ಡೆ, ಯಶೋದಾ ಎನ್ ಬೇಂದ್ರೋಡು, ರೇಣುಕಾ ದೇವಿ, ಜನನಿ(ಉಪಾಧ್ಯಕ್ಷರು), ರವೀಂದ್ರ ರೈ ಮಲ್ಲಾವರ, ಹರೀಶ್ ಶೆಟ್ಟಿ ನೆಲ್ಲಿಪುಣಿ ನಾಟೆಕಲ್ಲು, ಹರೀಶ್ ಗುತ್ತುಹಿತ್ಲು, ರಾಜೇಶ್ ಶೆಟ್ಟಿ ಬಲೆಕ್ಕಳ, ಸಂತೋμï ರೈ ಗಾಡಿಗುಡ್ಡೆ, ಎಂ ಕುಮಾರನ್ ದೇಲಂಪಾಡಿ, ರತ್ನಾಕರ ಅಂಬಿಕಾನಗರ(ಕಾರ್ಯದರ್ಶಿಗಳು) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು
ಸೇವಾಸಮಿತಿ ಕಾರ್ಯದರ್ಶಿ ಚಿದಾನಂದ ರೈ ಬಲೆಕ್ಕಳ ಸ್ವಾಗತಿಸಿ, ರಾಜೇಶ್ ಶೆಟ್ಟಿ ಬಲೆಕ್ಕಳ ವಂದಿಸಿದರು.
ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ರೂಪೀಕರಣ
0
ಮಾರ್ಚ್ 30, 2023
Tags

