ಮಂಜೇಶ್ವರ: ಮಂಜೇಶ್ವರ ತಾಲೂಕಿನ ಸುರಿಬೈಲು ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಮಿತಿಯವರ ಬೇಡಿಕೆಗೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಸ್ವಾಮಿಯ ಪ್ರಸಾದ ರೂಪವಾಗಿ ರೂ.10 ಲಕ್ಷ ಮೊತ್ತದ ಸಹಾಯಧನವನ್ನು ಮಂಜೂರುಗೊಳಿಸಿದ್ದು, ಪೂಜ್ಯರ ಆದೇಶದಂತೆ ರೂ.10ಲಕ್ಷದ ಡಿ.ಡಿ.ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಸಂತ್ ಸಾಲಿಯಾನ್ ಅವರು ಸುರಿಬೈಲು ಶ್ರೀ ಸದಾಶಿವ ಕ್ಷೇತ್ರಕ್ಕೆ ಭೇಟಿ ನೀಡಿ ಸಮಿತಿಯ ಅಧ್ಯಕ್ಷ ಬಲರಾಮ ಭಟ್ ಮತ್ತು ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದ.ಕ. 2 ನೇ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್ ಬಾಗ್, ನೂತನ ಅಧ್ಯಕ್ಷ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಮಾಜಿ ಅಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲ್, ಸ್ಥಳೀಯ ವಾರ್ಡ್ ಸದಸ್ಯ ಯಾದವ, ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯಕುಮಾರ್, ಕಾಸರಗೋಡು ಮತ್ತು ಮಂಜೇಶ್ವರ ಯೋಜನಾವ್ಯಾಪ್ತಿಯ ಯೋಜನಾಧಿಕಾರಿಗಳು, ತಲಪಾಡಿ ವಲಯದ ಮೇಲ್ವಿಚಾರಕರು, ವಿಭಾಗದ ಸೇವಾಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

.jpg)
