ತಿರುವನಂತಪುರಂ: ಕೆಎಸ್‍ಆರ್‍ಟಿಸಿ ವೇತನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮುಷ್ಕರ ತೀವ್ರಗೊಳಿಸಲು ಒಕ್ಕೂಟಗಳು ಮುಂದಾಗಿವೆ.
ಸಾರಿಗೆ ಸಚಿವ ಆಂಟೋನಿ ರಾಜ್ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಂತುಗಳಲ್ಲಿ ವೇತನ ನೀಡುವುದನ್ನು ನಿಲ್ಲಿಸುವವರೆಗೆ ಮುಷ್ಕರ ಮುಂದುವರಿಸಲು ಆಡಳಿತ ಮತ್ತು ವಿರೋಧ ಪಕ್ಷಗಳ ಸಂಘಟನೆಗಳು ನಿರ್ಧರಿಸಿವೆ.
ಇದೇ ವೇಳೆ ಮುಖ್ಯಮಂತ್ರಿ ಜೊತೆ ನಡೆಸಿದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಮುಷ್ಕರ ಆರಂಭಿಸಿದ್ದವು. ನಂತರ ಸಿಐಟಿಯು ಮತ್ತು ಟಿಡಿಎಫ್ ಸಂಘಟನೆಗಳು ಮುಖ್ಯ ಕಚೇರಿ ಎದುರು ಧರಣಿ ಮುಂದುವರಿಸುವುದಾಗಿ ಘೋಷಿಸಿದವು. ಜಂಟಿ ಒಕ್ಕೂಟದಿಂದ ಹಿಂದೆ ಸರಿದಿರುವ ಬಿಎಂಎಸ್ ಮತ್ತೊಮ್ಮೆ ಮುಷ್ಕರ ಸಹಿತ ಪ್ರತಿಭಟನೆಗೆ ಇಳಿಯಲಿದೆ.
ನೌಕರರಿಗೆ ಕಂತುಗಳಲ್ಲಿ ವೇತನ ನೀಡುವುದನ್ನು ನಿಲ್ಲಿಸಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ. ಆದರೆ ಸರಕಾರದಿಂದ ಆರ್ಥಿಕ ನೆರವು ಸಿಕ್ಕರೆ ಮಾತ್ರ ವೇತನ ವಿತರಣೆ ಸಾಧ್ಯ ಎಂಬುದು ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ಹಾಗೂ ಸಾರಿಗೆ ಸಚಿವರ ನಿಲುವಾಗಿದೆ.


