ಕೊಲ್ಲಂ: ಕೊಲ್ಲಂ ತಾಲೂಕು ಆಸ್ಪತ್ರೆಯಲ್ಲಿ ಯುವ ವೈದ್ಯೆಯನ್ನು ಚಾಕುವಿನಿಂದ ಇರಿದು ಕೊಂದ ಘಟನೆಯಲ್ಲಿ ಕಾನೂನು ಸುರಕ್ಷತೆ ನೀಡಲು ವಿಫಲರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೌಸ್ ಸರ್ಜನ್ಸ್ ಅಸೋಸಿಯೇಷÀನ್ ಒತ್ತಾಯಿಸಿದೆ.
ವಂದನಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಸಂದೀಪ್‍ಗೆ ಕಠಿಣ ಶಿಕ್ಷೆಯಾಗದೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸಂಘಟನೆ ತಿಳಿಸಿದೆ.
ಅಲ್ಲದೆ, ವೈದ್ಯಕೀಯ ಕಾಲೇಜು ಸೇರಿದಂತೆ ಹೌಸ್ ಸರ್ಜನ್ಸ್ ರ ಕರ್ತವ್ಯದ ಅವಧಿಯನ್ನು ಮರುಹೊಂದಿಸಿ ಆದೇಶ ಹೊರಡಿಸಬೇಕು, ಕೆಲಸದ ಹೊರೆ ತಗ್ಗಿಸಬೇಕು ಎಂಬ ಬೇಡಿಕೆಗಳನ್ನೂ ಸಂಘಟನೆ ಮುಂದಿಟ್ಟಿದೆ. ವೈದ್ಯಕೀಯ ಪಿಜಿ ವೈದ್ಯರ ಸಂಘ ಕೆಎಂಪಿಜಿಎ ಕೂಡ ಘಟನೆಯ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ, ಸರ್ಕಾರವು ಸೂಕ್ತ ಭದ್ರತೆ ಮತ್ತು ವಸತಿ ಖಾತ್ರಿಪಡಿಸದ ಹೊರತು ಅವರು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಸೂಚಿಸಲಾಗಿದೆ.
ಇಂದು ಬೆಳಗ್ಗೆ ಆರೋಗ್ಯ ಸಚಿವರ ಜತೆಗಿನ ಚರ್ಚೆಯಲ್ಲಿ ವಿದ್ಯಾರ್ಥಿಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಆರೋಗ್ಯ ಸಚಿವರಲ್ಲದೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು, ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು ಚರ್ಚೆಯಲ್ಲಿ ಭಾಗವಹಿಸಿದ್ದರು. ಹೌಸ್ ಸರ್ಜನ್ಸ್ ಮತ್ತು ರೆಸಿಡೆನ್ಸ್ ವೈದ್ಯರ ಮುಷ್ಕರದಿಂದ ವೈದ್ಯಕೀಯ ಕಾಲೇಜುಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವೈದ್ಯಕೀಯ ಕಾಲೇಜು ಶಿಕ್ಷಕರ ಸಂಘ ಹೇಳಿದೆ. ಈ ಕಾರಣದಿಂದ ಅಗತ್ಯ ರೋಗಿಗಳು ಮಾತ್ರ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಬೇಕು ಎಂದು ಶಿಕ್ಷಕರ ಸಂಘ ತಿಳಿಸಿದೆ.


