ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ಕೋಡಿ ನಿವಾಸಿ ಸಾವೆರ್ ಡಿ'ಸೋಜ (63) ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಅಗ್ನಿಶಾಮಕ ದಳದ ಮುಳುಗು ತಜ್ಞರು ಇವರ ತೋಟದ ಕೆರೆ, ಬಾವಿಗಳಲ್ಲಿ ಹುಡುಕಾಟ ನಡೆಸಿದ್ದರೆ, ತನಿಖಾಧಿಕಾರಿ ಎಸ್.ಐ ನಿಖಿಲ್ ನೇತೃತ್ವದಲ್ಲಿ ಶ್ವಾನದಳ ಸ್ಥಳಕ್ಕೆ ಕರೆಸಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಸಾವೆರ್ ಡಿ.ಸೋಜ ಅವರು ಜುಲೈ 19ರಂದು ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇವರ ಬಗ್ಗೆ ಮಾಹಿತಿ ಲಭಿಸಿದವರು ಮಂಜೇಶ್ವರ ಪೆÇೀಲಿಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ(9645123984)ಗೆ ಮಾಹಿತಿ ನೀಡುವಂತೆ ಪೊಲೀಸರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


