ಕಾಸರಗೋಡು: ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ರೋಗಗಳು ಹೆಚ್ಚುತ್ತಿದ್ದು, ಆರೋಗ್ಯಕರ ಆಹಾರಕ್ಕೆ ಪ್ರಾಮುಖ್ಯತೆ ನೀಡುವುದರ ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ವರು ಸದಸ್ಯರ ಕುಟುಂಬಶ್ರೀ ತಂಡ ವಿಟಮಿನ್, ಮಿನರಲ್, ಆ್ಯಂಟಿಆಕ್ಸಿಡೆಂಟ್, ಬೀಟಾ ಕ್ಯಾರೋಟಿನ್, ಫ್ಯಾಟಿ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ‘ಬೇಬಿ ಪ್ಲಾಂಟ್’ಗಳನ್ನು ವಾಣಿಜ್ಯಿಕವಾಗಿ ಉತ್ಪಾದಿಸಿ ಆದಾಯ ಗಳಿಸುವಲ್ಲಿ ಮೈಕ್ರೋಗ್ರೀನ್ ಕೃಷಿ ತಂತ್ರಜ್ಞಾನ ಅಳವಡಿಸಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ.
ಮೈಕ್ರೋಗ್ರೀನ್ ಎಂದರೇನು?:
ಮೈಕ್ರೋಗ್ರೀನ್ ಗಳು ತರಕಾರಿಗಳ ಸಣ್ಣ ಮೊಳಕೆ ಬೀಜಗಳಾಗಿವೆ. ಬೀಜಕಗಳ ಜೊತೆಗೆ ಮೊಳಕೆಯೊಡೆದ ಬೀಜದಿಂದ ಮೊದಲ 2 ಎಲೆಗಳು ರೂಪುಗೊಂಡಾಗ ಮೈಕ್ರೋಗ್ರೀನ್‍ಗಳಾಗಿ ಬಳಸಲಾಗುತ್ತದೆ. ಪಾಲಕ್ ಸೇರಿದಂತೆ ನಾವು ಸಾಮಾನ್ಯವಾಗಿ ಸೇವಿಸುವ ಯಾವುದೇ ಎಲೆಗಳ ಸೊಪ್ಪಿಗಿಂತ ಮೈಕ್ರೋಗ್ರೀನ್‍ಗಳು ಹೆಚ್ಚು ಪೌಷ್ಠಿಕವಾಗಿದೆ. ಮೈಕ್ರೊಗ್ರೀನ್‍ಗಳನ್ನು ತಯಾರಿಸಲು ಅವರು ಸುಲಭವಾಗಿ ಲಭ್ಯವಿರುವ ಕಡಲೆ, ಬೀನ್ಸ್, ಮೆಂತ್ಯ, ಬಟಾಣಿ ಮತ್ತು ಇತರ ಧಾನ್ಯಗಳು ಮತ್ತು ಪಾಲಕ್ ನ್ನು ಬಳಸುತ್ತಾರೆ. ಬೀಟ್ರೂಟ್, ಕೋಸುಗಡ್ಡೆ, ಮೂಲಂಗಿ, ಎಲೆಕೋಸು ಮತ್ತು ಲೆಟಿಸ್ ಬೀಜಗಳನ್ನು ಸಹ ಬಳಸಲಾಗುತ್ತದೆ.
ಕೃಷಿ ವಿಧಾನ:
ಲಭ್ಯವಿರುವ ಯಾವುದೇ ಧಾನ್ಯಗಳ ಮೈಕ್ರೋಗ್ರೀನ್‍ಗಳನ್ನು ತಯಾರಿಸಲು ಬಳಸಬಹುದು. ಅವುಗಳನ್ನು ಪ್ಲಾಸ್ಟಿಕ್ ಟ್ರೇಗಳು, ಗ್ರೋಬ್ಯಾಗ್‍ಗಳು, ಸಸ್ಯ ಕುಂಡಗಳು ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಯಾವುದಲ್ಲೂ ಲಭ್ಯ ಸ್ಥಳದಲ್ಲಿ ಬೆಳೆಯಬಹುದು. ಜಲ್ಲಿ, ಕಾಗದ, ಮಣ್ಣು, ನೀರು, ಇವುಗಳಲ್ಲಿ ಯಾವುzರಲ್ಲೂ ಬೆಳೆಯುವ ವಸ್ತುವಾಗಿ ಬಳಸಬಹುದು.
ಬೀಜಗಳನ್ನು ಕನಿಷ್ಠ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಲಾಗುತ್ತದೆ. ಮೈಕ್ರೋಗ್ರೀನ್‍ಗಳನ್ನು ಬೆಳೆಸಬೇಕಾದ ಮಡಕೆಯನ್ನು ಸ್ವಚ್ಛಗೊಳಿಸಿ, ಅರ್ಧದಷ್ಟು ಮಡಕೆಯನ್ನು ಮರಳು ಕಾಗದ / ಕಾಗದದಿಂದ ತುಂಬಿಸಿ (ಸುದ್ದಿ ಪೇಪರ್ ಅಲ್ಲ) ಮತ್ತು ಬೀಜಗಳನ್ನು ನಿಯಮಿತವಾಗಿ ಊರಲಾಗುತ್ತದೆ. ಎರಡು ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ ಮತ್ತು ತಾಜಾ ಎಲೆಗಳಾಗಿ ರೂಪಾಂತರಗೊಳ್ಳುತ್ತವೆ. ನೀರನ್ನು ಎರಡು ಬಾರಿ ಸಿಂಪಡಿಸಬೇಕು. ಏಳರಿಂದ 10 ದಿನಗಳ ನಂತರ ಎಲೆಗಳನ್ನು ಮೈಕ್ರೋಗ್ರೀನ್ ರೂಪದಲ್ಲಿ ಕೊಯ್ಲು ಮಾಡಬಹುದು. ಮೈಕ್ರೋಗ್ರೀನ್ ಎಲೆಗಳು ಬೀಜಗಳಿಗಿಂತ 40 ಪಟ್ಟು ಹೆಚ್ಚು ಪೌಷ್ಠಿಕವಾಗಿದೆ. ಮೈಕ್ರೋಗ್ರೀನ್‍ಗಳು ಹೆಚ್ಚು ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳನ್ನು ಹೊಂದಿರುವ ಹಂತವಾಗಿದೆ. ಇದು ಕಬ್ಬಿಣ, ಪೋಲಿಕ್ ಆಮ್ಲ, ಸತು ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.
ಪ್ರತಿ ಸಸಿಗೆ 30ರಿಂದ 150 ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲೆಗಳ ಸೊಪ್ಪಿನಿಂದ ಮಾಡಿದ ಭಕ್ಷ್ಯಗಳಿಗೆ ಮೈಕ್ರೋಗ್ರೀನ್ ಗಳನ್ನು ಬಳಸಬಹುದು. ಇದನ್ನು ಸಲಾಡ್‍ಗಳಲ್ಲಿ ಬೇಯಿಸದೆಯೂ ಬಳಸಬಹುದು.

.jpeg)
