ಕಾಸರಗೋಡು: ಕರ್ನಾಟಕ ಸಮಿತಿ ಮಾಜಿ ಅಧ್ಯಕ್ಷ, ಮಾಜಿ ಶಾಸಕ, ಕನ್ನಡ ಹೋರಾಟಗಾರ ದಿ. ಯು.ಪಿ ಕುಣಿಕುಳ್ಳಾಯ ಅವರ'ಇವರೆಲ್ಲಿಯವರು'ಕೃತಿಯ ಚಿಂತನ ಮಂಥನ ಹಾಗೂ ಸಂಸ್ಮರಣಾ ಸಮಾರಂಭ ಆ. 13ರಂದು ಮಧ್ಯಾಹ್ನ ಸಂಜೆ 4ಕ್ಕೆ ಕಾಸರಗೋಡು ಬೀರಂತಬೈಲು ಕನ್ನಡ ಅಧ್ಯಾಪಕರ ಭವನದಲ್ಲಿ ಜರುಗಲಿದೆ.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು. ಕುಂಬಳೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಬಬಿತಾ ಎ ಅವರು ಇವರೆಲ್ಲಿಯವರು ಕೃತಿಯ ಬಗ್ಗೆ ಚಿಂತನ ಮಂಥನ ನಡೆಸುವರು. ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಸಂಸ್ಮರಣಾ ಭಾಷಣ ಮಾಡುವರು. ನಿವೃತ್ತ ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ, ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಮಹಾಲಿಂಗೇಶ್ವರ ರಾಜ್, ಕೆಪಿಎಸ್ಸಿ ನಿವೃತ್ತ ಅಧೀನ ಕಾರ್ಯದರ್ಶಿ ಶ್ಯಾಮರಾವ್ ಉಂಡೆಮನೆ ಒಡನಾಟದ ಸವಿನೆನಪು ಹಂಚಿಕೊಳ್ಳುವರು.
ಸಂಗೀತ-ನ್ರತ್ಯ ಶಿಕ್ಷಕಿ ಹರಿಣಾಕ್ಷಿ ವಿ ಅವರಿಂದ ನಾಡಗೀತೆಗಳ ಗಾಯನ, ಪ್ರತಿಭಾವಂತ ಗಾಯಕ-ಗಾಯಕಿಯರಿಂದ ಗಾನಸುಧೆ ಕಾರ್ಯಕ್ರಮ ಜರುಗಲಿರುವುದು.

