HEALTH TIPS

ರೈಲ್ವೇ ಪಾಲಕ್ಕಾಡ್ ವಿಭಾಗದಿಂದ ಆದಾಯ ಕೊಯ್ಲು: ಪ್ರಯಾಣ ದರದಲ್ಲಿ 309.08 ಕೋಟಿ, ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ 25 ಲಕ್ಷ ಹೆಚ್ಚಳ: ಒಟ್ಟು ಆದಾಯ 489.47 ಕೋಟಿ ರೂ.

                 ಪಾಲಕ್ಕಾಡ್: ರೈಲ್ವೇ ಪಾಲಕ್ಕಾಡ್ ವಿಭಾಗವು ಆರ್ಥಿಕ ವರ್ಷದಲ್ಲಿ ಅತ್ಯುತ್ತಮ ಆದಾಯವನ್ನು ಸಂಗ್ರಹಿಸಿದೆ. ಕಳೆದ ವರ್ಷಕ್ಕಿಂತ ಶೇ.10.95ರಷ್ಟು ಆದಾಯ ಹೆಚ್ಚಿದ್ದು, 489.47 ಕೋಟಿ ರೂ.ಗೆ ತಲುಪಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಮುಕುಂದ್ ಮಾಹಿತಿ ನೀಡಿದ್ದಾರೆ.

             ಪ್ರಯಾಣ ದರದಲ್ಲಿ ಶೇ.5.10ರಷ್ಟು ಏರಿಕೆ ದಾಖಲಿಸಿದ್ದು, 309.08 ಕೋಟಿ ರೂ.ಲಾಭ ಗಳಿಸಲಾಗಿದೆ.  ಈ ಅವಧಿಯಲ್ಲಿ 2.42 ಕೋಟಿ ಜನರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 25 ಲಕ್ಷ ಪ್ರಯಾಣಿಕರು ರೈಲು ಸಾರಿಗೆಯನ್ನು ಅವಲಂಬಿಸಿದ್ದಾರೆ.

               ಸರಕು ಸಾಗಣೆಯಲ್ಲಿ 128 ಕೋಟಿ, ಶೇ.4.08 ಬೆಳವಣಿಗೆ ದಾಖಲಾಗಿದೆ. ವಿಭಾಗದಿಂದ ವಿವಿಧೆಡೆ 1.58 ಮೆ.ಟನ್ ಸರಕನ್ನು ಕೊಂಡೊಯ್ಯಲಾಗಿದೆ. ಟಿಕೆಟ್ ರಹಿತ ಪ್ರಯಾಣಿಕರಿಂದ 6.69 ಕೋಟಿ ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ಒಟ್ಟು ಆದಾಯ 489.47 ಕೋಟಿ ರೂ.ಲಭಿಸಿತ್ತು.

             ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಪ್ರಕಾರ ರೈಲು ನಿಲ್ದಾಣಗಳು, ಒಟ್ಟಪಾಲಂ, ನಿಲಂಬೂರ್ ರಸ್ತೆ, ಅಂಗಡಿಪುರಂ, ಕುಟ್ಟಿಪುರಂ, ತಿರೂರ್, ಫರೋಕ್, ಪರಪ್ಪನಂಗಡಿ, ವಡಕರ, ತಲಶ್ಶೇರಿ, ಮಾಹಿ, ಪಯ್ಯನ್ನೂರು, ಕಾಸರಗೋಡು, ಕಣ್ಣೂರು, ಮಂಗಳೂರು, ಪೆÇಲ್ಲಾಚಿ ನಿಲ್ದಾಣಗಳು ಮತ್ತು ಶೋರ್ನೂರು ಮತ್ತು ಪಾಲಕ್ಕಾಡ್‍ಗಳ ಅಭಿವೃದ್ಧಿಗೆ ಗುರಿ ಇರಿಸಲಾಗಿದೆ. ರೈಲ್ವೆ ಸಚಿವಾಲಯದಿಂದ ಜಂಕ್ಷನ್‍ಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕೇಂದ್ರ ಸರ್ಕಾರ ಆಧುನಿಕ ರೀತಿಯಲ್ಲಿ ನವೀಕರಿಸುವ ಲಕ್ಷ್ಯವಿರಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries