HEALTH TIPS

ಮಣಿಪುರದಲ್ಲಿ ಭೂಕುಸಿತ | ಹೆದ್ದಾರಿ ಬಂದ್; ನಿಂತಲ್ಲೇ ನಿಂತ ಕನಿಷ್ಠ 500 ಟ್ರಕ್

               ಇಂಫಾಲ್‌: ಮಣಿಪುರದ ನೊನೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಇಂಫಾಲ್‌-ಸಿಲ್ಛಾರ್‌ ಹೆದ್ದಾರಿ ಬಂದ್‌ ಆಗಿದೆ. ಇದರಿಂದಾಗಿ ಕನಿಷ್ಠ 500 ಸರಕು ಸಾಗಣೆಯ ಟ್ರಕ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

                 ಐರಾಂಗ್-ಅವಾಂಗ್‌ಖುಲ್‌, ಖಾಂಗ್‌ಸಂಗ್‌-ಅವಾಂಗ್‌ಖುಲ್‌ ಹಾಗೂ ರಂಗ್‌ಖುಯಿ ಗ್ರಾಮಗಳ ನಡುವೆ ಸಾಗಿರುವ ರಾಷ್ಟ್ರೀಯ ಹೆದ್ದಾರಿ-37ರಲ್ಲಿ ಭೂಕುಸಿತವಾಗಿದೆ.

                 ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದು ಭೂಕುಸಿತಕ್ಕೆ ಕಾರಣವಾಗಿದೆ. ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

                   ಜಿಲ್ಲೆಯಲ್ಲಿ ಕಳೆದ ವರ್ಷವೂ ಭೂಕುಸಿತ ಸಂಭವಿಸಿತ್ತು. ಜಿರಿಬಮ್‌-ಇಂಫಾಲ್‌ ರೈಲು ಮಾರ್ಗದಲ್ಲಿ ತುಪುಲ್‌ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ದುರಂತದಲ್ಲಿ 61 ಜನರು ಮೃತಪಟ್ಟಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries