ಕಾಸರಗೋಡು: ಕಸ ಮುಕ್ತ ನವ ಕೇರಳದ ಎರಡನೇ ಹಂತದ ಅಂಗವಾಗಿ ಜಿಲ್ಲೆಯಲ್ಲಿ ಅಕ್ಟೋಬರ್ 1 ಮತ್ತು 2 ರಂದು ವ್ಯಾಪಕ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಕಸದ ರಾಶಿ ತೆಗೆದು ಸ್ವಚ್ಛ ಸ್ಥಳವಾಗಿ ಬದಲಾಯಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಶುಚೀಕರಣ ಚಟುವಟಿಕೆನಡೆಸಲಾಗುವುದು. 2024ರ ಜನವರಿ 26ರೊಳಗೆ ಎಲ್ಲಾ ಪ್ರದೇಶವನ್ನು ಶುಚಿತ್ವ ಪ್ರದೇಶ ಎಂದು ಘೋಷಿಸಲು ರಾಜ್ಯ ಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಎನ್ನೆಸ್ಸೆಸ್ ತಂಡದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೂರೈವತ್ತು ಸ್ನೇಹ ಮಂದಿರಗಳನ್ನು ನಿರ್ಮಿಸಲಾಗುವುದು. ಕಸದ ಕುಂಡಗಳನ್ನು ಅಳವಡಿಸಿ, ಇದರಿಂದ ಕಸ ಸಂಗ್ರಹಿಸಲಾಗುವುದು. ತ್ಯಾಜ್ಯ ತೆರವುಗೊಳಿಸಿದ ಪ್ರದೇಶಗಳನ್ನು ಹಸಿರು ಸ್ಥಳಗಳು, ಉದ್ಯಾನ ಹಾಗೂ ಆಸನಗಳನ್ನು ಅಳವಡಿಸಿ ಸಂಚಾರಯೋಗ್ಯ ಪರಿವರ್ತಿಸಲಾಗುತ್ತದೆ. ಇದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸಿದ್ಧತೆ ನಡೆಸಿದ್ದಾರೆ.
ಅಕ್ಟೋಬರ್ 2ರಂದು ಸ್ನೇಹರಂಗ ಚಟುವಟಿಕೆಗಳೂ ಆರಂಭವಾಗಲಿವೆ. ಪೂರ್ವಸಿದ್ಧತಾ ಕಾರ್ಯದ ಅಂಗವಾಗಿ ಪ್ರಚಾರ ಕಾರ್ಯಾಲಯದ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸ್ಥಳೀಯಾಡಳಿತ ಸಂಸ್ಥೆ ಉಪನಿರ್ದೇಶಕ ಕೆ.ವಿ.ಹರಿದಾಸ್ ಅಧ್ಯಕ್ಷತೆ ವಹಿಸಿದ್ದರು

