ಮುಳ್ಳೇರಿಯ: ಕೋಟೂರು ಶ್ರೀ ಕಾರ್ತಿಕೇಯ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರ ಬಯಲಾಟ ಸಮಿತಿಯ ಜಂಟಿ ಸಭೆ ಇತ್ತೀಚೆಗೆ ಕೋಟೂರು ಭಜನಾ ಮಂದಿರದಲ್ಲಿ ಜರಗಿತು.
ಸಭೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಕೋಟೂರಿನಲ್ಲಿ ಡಿ. 27 ರಂದು ಯಕ್ಷಗಾನ ಬಯಲಾಟವನ್ನು ಜರಗಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನರಸಿಂಹ ಭಟ್ ಪಾತನಡ್ಕ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬಯಲಾಟದ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಸಮಿತಿಯ ಕೋಶಾಧಿಕಾರಿ ಮುರಳಿಕೃಷ್ಣ ಸ್ಕಂದ, ಗೋಪಾಲನ್ ಕೆ, ಕೃಷ್ಣ ಭಟ್ ಅಡ್ಕ, ಸೋಮಶೇಖರ ಬಳ್ಳುಳ್ಳಾಯ, ಯತೀಶ್ ಪರಯಂಗೋಡ್, ಸುಬ್ರಹ್ಮಣ್ಯ ಹೊಳ್ಳ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಬಯಲಾಟ ಜಂಟಿ ಸಮಿತಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಅಡ್ಕ ಸ್ವಾಗತಿಸಿ, ಗೋವಿಂದ ಬಳ್ಳಮೂಲೆ ವಂದಿಸಿದರು.

.jpg)
