ಮಂಗಳೂರು: ನಗರ ಡೆನ್ಜ್ ಫೌಂಡೇಷನ್ ಆಯೋಜಿಸಿರುವ 15 ವರ್ಷದೊಳಗಿನ ಬಾಲಕರ 5 ಎ ಸೈಡ್ ರಾಷ್ಟ್ರೀಯ ಫುಟ್‌ಬಾಲ್ ಟೂರ್ನಿ ಡಿಸೆಂಬರ್ 9 ಮತ್ತು 10ರಂದು ನಗರದ ಪರ್ಫೆಕ್ಟ್ ಪಾಸ್ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
0
samarasasudhi
ಅಕ್ಟೋಬರ್ 18, 2023
ಮಂಗಳೂರು: ನಗರ ಡೆನ್ಜ್ ಫೌಂಡೇಷನ್ ಆಯೋಜಿಸಿರುವ 15 ವರ್ಷದೊಳಗಿನ ಬಾಲಕರ 5 ಎ ಸೈಡ್ ರಾಷ್ಟ್ರೀಯ ಫುಟ್‌ಬಾಲ್ ಟೂರ್ನಿ ಡಿಸೆಂಬರ್ 9 ಮತ್ತು 10ರಂದು ನಗರದ ಪರ್ಫೆಕ್ಟ್ ಪಾಸ್ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಶಾಲೆ, ಕ್ಲಬ್‌ಗಳು, ಅಕಾಡೆಮಿಗಳು ಮತ್ತು ಫುಟ್‌ಬಾಲ್ ಸಂಸ್ಥೆಗಳ ಆಟಗಾರರು ಪಾಲ್ಗೊಳ್ಳಬಹುದಾಗಿದೆ.
ಪ್ರವೇಶ ಪತ್ರಗಳನ್ನು ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ಪಾಲ್ಗೊಳ್ಳಬಯಸುವವರು denzsports@gmail.com ಗೆ ಮೇಲ್ ಕಳುಹಿಸಬಹುದು ಅಥವಾ 8095810030 ಸಂಖ್ಯೆಗೆ ಕರೆ ಮಾಡಬಹುದು. ಮಾಹಿತಿಗೆ 8095810030 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.