ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸರ ಚರ್ಚಿನ ಅಭಿವೃದ್ಧಿ ಕಾರ್ಯದಂಗವಾಗಿ ಫೆಬ್ರವರಿ 4ಕ್ಕೆ ಆಯೋಜಿಸಿದ ಚಾಪರ್ಕ ಕಲಾವಿದರ "ಪುದರ್ ದೀದಾಂಡ್" ನಾಟಕದ ಆಮಂತ್ರಣ ಪತ್ರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗಡಿನಾಡ ಕನ್ನಡಿಗ ಅಬ್ದುಲ್ಲ ಮಾದುಮೂಲೆ ಅವರು ಬಿಡುಗಡೆಗೊಳಿಸಿದರು. ಚರ್ಚಿನ ಪಾಧರ್ ನೇಲ್ಸನ್ ಡಿ'ಆಲ್ಮೇಡಾ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕೆಥೋಲಿಕ್ ಸಭಾದ ಜಿಲ್ಲಾಧ್ಯಕ್ಷ ರಾಜು ಜೋನ್ ಡಿ.ಸೋಜ, ಘಟಕಾಧ್ಯಕ್ಷ ಅಮೃತ್ ಲಾಲ್ ಡಿಸೋಜ, ರೋಹನ್ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದ.ಕ.ರಾಜ್ಯೋತ್ಸವ ಪುರಸ್ಕೃತರಾದ ಅಬ್ದುಲ್ಲ ಮಾದುಮೂಲೆಯವರನ್ನು ಚರ್ಚಿನ ಪರವಾಗಿ ಸನ್ಮಾನಿಸಲಾಯಿತು.

.jpg)
