ಕಾಸರಗೋಡು: ಪರವನಡ್ಕದ ಸೇವಾಭಾರತಿಯ ವಿವೇಕಾನಂದ ಸೇವಾ ಸಮಿತಿ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ, ಅಭಿನಂದನೆ, ಫ್ರೀಜರ್ ಸಮರ್ಪಣೆ, ಗಾಲಿಕುರ್ಚಿ ವಿತರಣಾ ಸಮಾರಂಭ ಪರವನಡ್ಕದಲ್ಲಿ ಜರುಗಿತು.
ಆರೆಸ್ಸೆಸ್ ಕಾಞಂಗಾಡ್ ಜಿಲ್ಲಾ ಸಂಘಚಾಲಕ್ ದಾಮೋದರನ್ ಆರ್ಕಿಟೆಕ್ಟ್ ಸಮರಂಭ ಉದ್ಘಾಟಿಸಿದರು. ವಿವೇಕಾನಂದ ಸೇವಾ ಸಮಿತಿ ಅಧ್ಯಕ್ಷ ಮಣಿಕಂಡನ್ ಮಣಿಯಂಗನಂ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವಿಧ ವಲಯಗಳಲ್ಲಿ ಕೈಗೊಂಡ ವಿಶಿಷ್ಟ ಸೇವೆ ಪರಿಗಣಿಸಿ ವಿವಿಧ ವಲಯದ ಗಣ್ಯರನ್ನು ಅಭಿನಂದಿಸಲಾಯಿತು.
ಕಾಸರಗೋಡು ಜನರಲ್ ಆಸ್ಪತ್ರೆಯ ಡಾ. ಜನಾರ್ದನ ನಾಯ್ಕ್, ಕಾಞಂಗಡ್ ಜಿಲ್ಲಾಸ್ಪತ್ರೆಯ ಡಾ. ಶಕೀಲ್ ಅನ್ವರ್, ಯುವ ಉದ್ಯಮಿ ಪ್ರಜಿತ್ ಮೇಲತ್, ರಕ್ತದಾನ ಮಾಡುವ ಮೂಲಕ ಸೇವಾ ಕೈಕರ್ಯ ನಡೆಸುತ್ತಿರುವ ಮನಾಸ್ ಎಂ.ಎ ಮಾವಿಲರೋಡ್, ದಯಾನಂದ ಭಟ್, ಕಬಡ್ಡಿ ತಾರೆ ಶಿಬಿನ್ ರಾಜ್ ಅವರನ್ನು ಗೌರವಿಸಲಾಯಿತು. ಚೆಮ್ನಾಡ್ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸದಾಶಿವನ್ ನಾಯರ್, ಖಂಡ ಕಾರ್ಯವಾಹ ಎನ್. ನಾಗೇಶ್, ಬಿಜೆಪಿ ಜಿಲ್ಲಾ ಸೆಲ್ ಕೋರ್ಡಿನೇಟರ್ ಬಾಬುರಾಜ್, ಸೇವಾಭಾರತೀ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಗಂಗಾಧರನ್ ಅಚ್ಚೇರಿ, ರಮೇಶ್ ಕಾಸರಗೋಡು, ಬಿಜೆಪಿ ಉದುಮ ಕ್ಷೇತ್ರ ಸಮಿತಿ ಅಧ್ಕ್ಷ ಕೆ.ಟಿ ಪುರುಷೋತ್ತನ್, ಬಿಎಂಎಸ್ ಜಿಲ್ಲಾ ಜತೆಕಾರ್ಯದರ್ಶಿ ಸುರೇಶ್ ದೇಳಿ, ಸೇವಾಭಾರತಿಯ ನಾರಾಯಣನ್ ಕೈಂದಾರ್ ಉಪಸ್ಥಿತರಿದ್ದರು. ಮೇಲ್ಪರಂಬ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಟಿ ಉತ್ತಮ್ದಾಸ್ ಬಹುಮಾನ ವಿತರಿಸಿದರು.
ವಿವೇಕಾನಂದ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೈಂದಾರ್ ಸ್ವಾಗತಿಸಿದರು. ಶ್ಯಾಮ್ ತೊಡುಕುಳಂ ವಂದಿಸಿದರು.

