ತಿರುವನಂತಪುರಂ: ವೈದ್ಯರ ಚೀಟಿ ಇಲ್ಲದೆ ಔಷÀಧ ಮಾರಾಟ ಮಾಡದಂತೆ ರಾಜ್ಯ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಯಾವುದೇ ಮೆಡಿಕಲ್ ಸ್ಟೋರ್‍ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಆಂಟಿಬಯೋಟಿಕ್‍ಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಜನರು ಕೂಡ ದೂರು ದಾಖಲಿಸಬಹುದು. ಆಂಟಿಬಯೋಟಿಕ್‍ಗಳ ಮಾರಾಟದ ದಾಖಲೆಗಳನ್ನು ಆಯಾ ಔಷಧಾಲಯಗಳು ಸರಿಯಾಗಿ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಹಾಗಾಗಿ ಆಂಟಿಬಯೋಟಿಕ್ ಬಳಕೆಯಿಂದ ಆದಷ್ಟು ದೂರವಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಆಂಟಿಬಯೋಟಿಕ್ ಔಷಧಿಗಳ ನಿಯಮಿತ ಸೇವನೆಯು ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆಂಟಿಬಯೋಟಿಕ್‍ಗಳಿಗೆ ನಿರೋಧಕವಾಗಿರುವ ಬ್ಯಾಕ್ಟೀರಿಯಾಗಳಿಂದ ಸೋಂಕಿನ ಅಪಾಯವಿದೆ. ಇದು ಆಂಟಿಮೈಕ್ರೊಬಿಯಲ್ ಪ್ರತಿರೋಧಕ್ಕೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.


