HEALTH TIPS

ಪೋಸ್ಟ್ ಗ್ರಾಜುಯೇಟ್ ಸೈಂಟಿಫಿಕ್ ಅಪ್ರೆಂಟಿಸ್, ಗ್ರಾಜುಯೇಟ್ ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗೆ ಸಂದರ್ಶನ

        

                        ಕಾಸರಗೋಡು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾಸರಗೋಡು ಜಿಲ್ಲಾ ಕಛೇರಿಯಲ್ಲಿ ಪೋಸ್ಟ್ ಗ್ರಾಜುಯೇಟ್ ಸೈಂಟಿಫಿಕ್ ಅಪ್ರೆಂಟಿಸ್‍ಗೆ ಎರಡು ಹುದ್ದೆ ತೆರವಾಗಿದ್ದು,  ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲು ವಾಕ್-ಇನ್ ಇಂಟವ್ರ್ಯೂ ಜನವರಿ 18 ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ವಿದ್ಯಾರ್ಹತೆ ಬಿ.ಟೆಕ್ ಸಿವಿಲ್ ಯಾ ಕೆಮಿಕಲ್ ಅಥವಾ ಎನ್ವಿರಾನ್ಮೆಂಟಲ್ ಆಗಿರಲಿದೆ.

               ಗ್ರಾಜುಯೇಟ್ ಇಂಜಿನಿಯರಿಂಗ್ ಅಪ್ರೆಂಟಿಸ್‍ಗೆ ಎರಡು ಹುದ್ದೆ ತೆರವಾಗಿದ್ದು, ವಾಕ್-ಇನ್ ಇಂಟವ್ರ್ಯೂ ಜನವರಿ 18 ರಂದು ಮಧ್ಯಾಹ್ನ 2 ಗಂಟೆಗೆ ಕಾಂಞಂಗಾಡ್ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ.  ಎಮ್.ಎ.ಎಸ್ಸಿ (ಕೆಮಿಸ್ಟ್ರಿ ಮೈಕ್ರೋ ಬಯಾಲಜಿ ಎನ್ವಿರಾನ್ಮೆಂಟ್ ಸಯನ್ಸ್) ವಿದ್ಯಾರ್ಹತೆಯಾಗಿದ್ದು,  ಪದವಿಗೆ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಗಿರಬೇಕು.  ತರಬೇತಿ ಅವಧಿ ಒಂದು ವರ್ಷ ಕಾಲಾವಧಿಯಾಗಿದ್ದು,  ವಯಸ್ಸಿನ ಮಿತಿ 28 ವರ್ಷ ಆಗಿದೆ. ಅರ್ಹ ಅಭ್ಯರ್ಥಿಗಳು ಸಂಬಂಧಿತ ಸರ್ಟಿಫಿಕೇಟ್, ಮಾರ್ಕ್ ಲಿಸ್ಟ್ ಎಂಬಿವುಗಳ ಸ್ವಯಂ ದೃಢೀಕರಿಸಿದ ಪ್ರತಿಗಳು, ಅನುಭವದ ಸರ್ಟಿಫಿಕೇಟುಗಳೊಂದಿಗೆ ಬೋರ್ಡಿನ ಕಾಂಞಂಗಾಡ್ ರೈಲ್ವೆ ನಿಲ್ದಾಣದ ಸಮೀಪ ಎಮ್.ಎ.ಎಮ್ ಆರ್ಕೇಡ್‍ನಲ್ಲಿ ಕಾರ್ಯನಿರ್ವಹಿಸುವ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಬೋರ್ಡಿನಲ್ಲಿ ಮೊದಲು ಅಪ್ರೆಂಟಿಸ್ ಆಗಿ ಸೇವೆ ಸಲ್ಲಿಸಿದವರು ಅರ್ಜಿ ಸಲ್ಲಿಸಬೇಕಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0467 2201180)  ವೆಬ್ ಸೈಟ್ ಞsಠಿಛಿb.ಞeಡಿಚಿಟಚಿ.gov.iಟಿ ಮೂಲಕ ಸಂಪರ್ಕಿಸಬಹುದಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries