ಆಲಪ್ಪುಳ: ಅಲಪ್ಪುಳ-ಧನ್‍ಬಾದ್ ಎಕ್ಸ್‍ಪ್ರೆಸ್‍ನಲ್ಲಿ ಕೇರಳ ಮೂಲದ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೈಲಿನ ವಾಶ್ ರೂಂನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.
ಅರಟ್ಟುಕುಳಂಗರ ಮೂಲದ ಸೂರಜಾ ಎಸ್ ನಾಯರ್ ಮೃತರು. ಇಂದು ಬೆಳಗ್ಗೆ ಜೋಲಾರ್‍ಪೇಟೆಯಲ್ಲಿ ಪ್ರಯಾಣಿಕರಿಗೆ ಸೂರಜಾ ಮೃತದೇಹ ಪತ್ತೆಯಾಗಿದೆ.
ಒಡಿಶಾದಲ್ಲಿರುವ ತನ್ನ ಸಹೋದರಿಯ ಮನೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಸಾವಿಗೆ ಹೃದಯಾಘಾತವೇ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.


