ನವದೆಹಲಿ: ಈಗಾಗಲೇ ಜಾರಿಯಲ್ಲಿ ಇರುವ ಐದು ಉಪಯೋಜನೆಗಳನ್ನು ಒಳಗೊಳ್ಳುವ 'ಪೃಥ್ವಿ ವಿಜ್ಞಾನ' ಹೆಸರಿನ ಸಮಗ್ರ ಯೋಜನೆಯೊಂದಕ್ಕೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ಅನುಮೋದನೆ ನೀಡಿದೆ. ಈ ಯೋಜನೆಗೆ 2021ರಿಂದ ಅನ್ವಯವಾಗುವಂತೆ 2026ರವರೆಗೆ ₹4,797 ಕೋಟಿ ವೆಚ್ಚವಾಗಲಿದೆ.
0
samarasasudhi
ಜನವರಿ 06, 2024
ನವದೆಹಲಿ: ಈಗಾಗಲೇ ಜಾರಿಯಲ್ಲಿ ಇರುವ ಐದು ಉಪಯೋಜನೆಗಳನ್ನು ಒಳಗೊಳ್ಳುವ 'ಪೃಥ್ವಿ ವಿಜ್ಞಾನ' ಹೆಸರಿನ ಸಮಗ್ರ ಯೋಜನೆಯೊಂದಕ್ಕೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ಅನುಮೋದನೆ ನೀಡಿದೆ. ಈ ಯೋಜನೆಗೆ 2021ರಿಂದ ಅನ್ವಯವಾಗುವಂತೆ 2026ರವರೆಗೆ ₹4,797 ಕೋಟಿ ವೆಚ್ಚವಾಗಲಿದೆ.
ಉಪ ಯೋಜನೆಗಳನ್ನು ಒಂದುಗೂಡಿಸಲು ಭೂವಿಜ್ಞಾನ ಸಚಿವಾಲಯ ಮುಂದಿರಿಸಿದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿತು. ಪೃಥ್ವಿ ವಿಜ್ಞಾನ ಯೋಜನೆಯು ಏಕೀಕೃತ ಬಹುಶಿಸ್ತೀಯ ಭೂವಿಜ್ಞಾನ ಸಂಶೋಧನೆಗೆ ಅನುವು ಮಾಡಿಕೊಡಲಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ಹವಾಮಾನ, ಸಮುದ್ರ, ನೀರು ಹೆಪ್ಪುಗಟ್ಟಿರುವ ಸ್ಥಳಗಳು, ಭೂಕಂಪನ ವಿಜ್ಞಾನಕ್ಕೆ ಸಂಬಂಧಿಸಿದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಂಶೋಧನೆಗಳು ನೆರವು ನೀಡಲಿವೆ.