HEALTH TIPS

ಗುರುವಾಯೂರಿನಲ್ಲಿ ನಿರ್ಮಾಣವಾಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: 56 ಕೋಟಿ ನೀಡಲಿರುವ ಮುಖೇಶ್ ಅಂಬಾನಿ

                  ಗುರುವಾಯೂರು: ಗುರುವಾಯೂರು ದೇವಸ್ವಂನ ಉದ್ದೇಶಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ತಾಂತ್ರಿಕ ಸಮಸ್ಯೆ ನಿವಾರಣೆಯಾಗಿದೆ.

                   ದೇವಸ್ವಂ ಇಲಾಖೆ ಉಸ್ತುವಾರಿ ಸಚಿವ ವಿ.ಎನ್. ವಾಸವನ್ 30ರಂದು ಶಂಕುಸ್ಥಾಪನೆ ನಡೆಸುವರು. ಆಸ್ಪತ್ರೆ ನಿರ್ಮಾಣಕ್ಕೆ ಮುಖೇಶ್ ಅಂಬಾನಿ 56 ಕೋಟಿ ರೂ.ನೆರವು ನೀಡುವರು. ಅಸ್ತಿತ್ವದಲ್ಲಿರುವ ದೇವಸ್ವಂ ವೈದ್ಯಕೀಯ ಕೇಂದ್ರದ ದಕ್ಷಿಣಕ್ಕೆ ಎರಡೂವರೆ ಎಕರೆ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ.

                   ಒಂದು ಲಕ್ಷ ಚದರ ಅಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ವಿನ್ಯಾಸವನ್ನು ಕಾನ್ಹಂಗಾತುಲ್ಲಾ  ದಾಮೋದರನ್ ಆರ್ಕಿಟೆಕ್ಟ್ಸ್ ಸಿದ್ಧಪಡಿಸಿದ್ದಾರೆ. 2022ರ ಸೆಪ್ಟೆಂಬರ್‍ನಲ್ಲಿ ಗುರುವಾಯೂರಿಗೆ ಭೇಟಿ ನೀಡಿದಾಗ ಮುಖೇಶ್ ಅಂಬಾನಿ ಭರವಸೆ ನೆರವಿನ ಭರವಸೆ ನೀಡಿದ್ದರು.

                ಅವರಿಗೂ ಆಸ್ಪತ್ರೆಯ ಲೇಔಟ್ ನೀಡಲಾಗಿದೆ. ನಿರ್ಮಾಣಕ್ಕೆ ಇರುವ ಅಡೆತಡೆಗಳು ತೆರವಾದ ನಂತರ ಅಂಬಾನಿ ಸಮೂಹವು ಮೊತ್ತವನ್ನು ಪಾವತಿಸಲಿದೆ ಎಂದು ತಿಳಿದುಬಂದಿದೆ. ಈ ಮೊತ್ತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮಾತ್ರ. ಉಳಿದ ಮೊತ್ತವನ್ನು ದೇವಸ್ವಂ ಖರ್ಚು ಮಾಡಲಿದೆ. ಆಸ್ಪತ್ರೆಯ ನಿರ್ವಹಣೆಯು ದೇವಸ್ವಂ ಮೇಲ್ವಿಚಾರಣೆಯಲ್ಲಿರುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries