ಮಂಜೇಶ್ವರ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಂಪ್ಲಾಯಿಸ್ ಗಳ ಕ್ರಿಕೆಟ್ ಟೂರ್ನಮೆಂಟ್ ಇ ಪಿ ಯಲ್ 2024 ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು.
ದೈವ ಪಾತ್ರಿ ವಕೀಲ ಭರತ್ ರಾಜ್ ಅಟ್ಟೆಗೋಳಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕ್ರೀಡೆಗಳು ಮಾನಸಿಕವಾಗಿ, ದೈಹಿಕವಾಗಿ ಉಲ್ಲಾಸವನ್ನು ತರುತ್ತದೆ. ಆಟದಲ್ಲಿ ಸೋಲು ಗೆಲುವುಗಳು ಸಾಮಾನ್ಯ ಆದರೆ ಆಟವನ್ನು ಪ್ರೀತಿಸಿ ಕ್ರೀಡಾ ಸ್ಪೂರ್ತಿಯಿಂದ ಆಡಬೇಕು. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಕ್ರೀಡಾಕೂಟ ಮಾದರಿಯಾಗಿರುತ್ತದೆ ಆದ್ದರಿಂದ ಇಂತಹ ಎಂಪ್ಲಾಯೀಸ್ ಗಳ ಕ್ರೀಡಾಕೂಟ ಮಾದರಿಯಾಗಿದೆ ಎಂದು ತಿಳಿಸಿದರು.
ಇ ಪಿ ಯಲ್ ಸಂಘಟಕ ಉದಯ್ ಸಾರಂಗ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಮುಳ್ಳೇರಿಯ ಶುಭ ಹಾರೈಸಿದರು. ಸಾಮಾಜಿಕ ಕಾರ್ಯಕರ್ತ ಪ್ರಿಜ್ಜು ಬಳ್ಳಾರ್, ನಯನ್ ಕುಮಾರ್ ಕುಂಟಾರ್, ಇ ಪಿ ಯಲ್ ಸಂಘಟಕ ಅಶೋಕ್ ಕೊಡ್ಲಮೊಗರು, ತುಳಸಿದಾಸ್ ಮಂಜೇಶ್ವರ, ರಘುರಾವ್ ಮಾಸ್ತರ್ ಮೀಯಪದವು ,ರಾಜೇಶ್ ಕೊಡ್ಲಮೊಗರು ಉಪಸ್ಥಿತರಿದ್ದರು.ಮಿಥುನ್ ಮಾಸ್ತರ್ ಸ್ವರ್ಗ ಸ್ವಾಗತಿಸಿ, ಶ್ಯಾಮ್ ರಂಜಿತ್ ಪೆರ್ಲ ವಂದಿಸಿದರು. ತೌಸಿಫ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.




