ಕಾಸರಗೋಡು: ನೀಲೇಶ್ವರ ತೆರು ಅಞೂಟ್ಟಂಬಲ ವೀರಕ್ಕಾವು ಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಸುಡುಮದ್ದು ದುರಂತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಕ್ಷೇತ್ರ ಸಮಿತಿಯ ಮೂವರು ಪದಾಧಿಕಾರಿಗಳಿಗೆ ಹೊಸದುರ್ಗ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಕಟ್ಟುನಿಟ್ಟಿನ ನಿಬಂಧನೆಯೊಂದಿಗೆ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರುಗೊಳಿಸಿದೆ. ಪಟಾಕಿ ಸಿಡಿಸಲು ನಿರ್ದೇಶ ನೀಡಿದ್ದ ಕೆ.ವಿ ವಿಜಯನ್ ಎಂಬಾತ ನ್ಯಾಯಾಂಗಬಂಧನದಲ್ಲಿದ್ದಾನೆ. ಹದಿನಾಲ್ಕು ವರ್ಷಗಳ ಹಿಂದೆ ಕೆ.ವಿ ವಿಜಯನ್ ಇದೇ ದೇವಸ್ಥಾನದಲ್ಲಿ ಪಟಾಕಿ ಸಿಡಿಸುವ ಮಧ್ಯೆ ಎಡಕೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದನು ಎಂದು ಪೊಲಿಸರು ತಿಳಿಸಿದ್ದಾರೆ. ಪಟಾಕಿ ಸಿಡಿಸುವ ಮಧ್ಯೆ ಆರೋಪಿಗಳು ಅಮಲು ಪದಾರ್ಥ ಸೇವಿಸಿದ್ದರೆಂದೂ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ನರಹತ್ಯಾಯತ್ನದ ಕೇಸು ದಾಖಲಿಸಲಾಗಿದೆ. ಸ್ಪೋಟಕ ವಸ್ತು ತಡೆ ಕಾಯ್ದೆಯನ್ವಯ ಕೇಸೂ ದಾಖಲಿಸಲಾಗಿದೆ.
ಈ ಮಧ್ಯೆ ಆಸ್ಪತ್ರೆಯಲಕ್ಲಿ ಚಿಕಿತ್ಸೆಯಲ್ಲಿರುವವರನ್ನು ಖುದ್ದು ಭೇಟಿಯಾಗಿ ಅವರಿಂದ ಹೇಳಿಕೆ ಸಂಗ್ರಹಿಸುವ ಕೆಲಸವೂ ನಡೆದುಬರುತ್ತಿದೆ. ದುರಂತದ ಬಗ್ಗೆ ಕಾಞಂಗಾಡು ಡಿವೈಎಸ್‍ಪಿ ಬಾಬು ಪೆರಿಙÉೂೀತ್ ಅವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

