ಬದಿಯಡ್ಕ: ಮಾನ್ಯ ಉಳ್ಳೋಡಿ ನಿತ್ಯಾನಂದಕೃಪಾ ನಿವಾಸಿ, ಬದಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ ರವೀಂದ್ರ ಮಾಸ್ತರ್ ಅವರ ಪುತ್ರ, ಎಲ್‍ಐಸಿ ಏಜೆಂಟ್ ಆರ್. ಸಉಬ್ರಹ್ಮಣ್ಯ(45)ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಅಸೌಖ್ಯ ಕಾಣಿಸಿಕೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಉತ್ತಮ ಕ್ರಿಕೆಟ್ ಪಟುವಾಗಿದ್ದರು. ಮಾನ್ಯ ಸಾಮ್ರಾಟ್ ಸಂಘಟನೆ ಸಕ್ರಿಯ ಸದಸ್ಯರಾಗಿದ್ದರು. ಕಾಸರಗೋಡು ರೈಲ್ವೆ ಪ್ರಯಾಣಿಕರ ಸಂಘದ ಮಾಜಿ ಜೊತೆಕಾರ್ಯದರ್ಶಿಯಾಗಿದ್ದರು. ಅವರು ತಾಯಿ, ಪುತ್ರನನ್ನು ಅಗಲಿದ್ದಾರೆ.


