ಕಾಸರಗೋಡು: ತೆಕ್ಕಿಲ್ಪರಂಬ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ಶಾಲಾಕಲೋತ್ಸವದ ಪ್ರೌಢಶಾಲಾ ಯಕ್ಷಗಾನಸ್ಪರ್ಧೆಯಲ್ಲಿ ಕೂಡ್ಲು ಶ್ರೀಗೋಪಾಲಕೃಷ್ಣಪ್ರೌಢಶಾಲೆಗೆ 'ಎ' ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಲಭಿಸಿತು.
ತಂಡ ಪ್ರದರ್ಶಿಸಿದ 'ಮುರಾಸುರ ವಧೆ'ಪ್ರೇಕ್ಷಕರ ಮನಸೂರೆಗೊಂಡಿತು. ರಂಜಿತ್ಗೋಳಿಯಡ್ಕ ನಿರ್ದೇಶಿಸಿದ ತಂಡದಲ್ಲಿ ದೇವೇಂದ್ರನಾಗಿ ಸಮೀಕ್ಷ ಕೆ, ಅಗ್ನಿಯಾಗಿ ತೃಷ, ವರುಣನಾಗಿ ದ್ರುವಿತ, ಮುರಾಸುರನಾಗಿ ಪ್ರಣೀತ್ಕೂಡ್ಲು, ದೀರ್ಘಾಕ್ಷನಾಗಿ ವೈಷ್ಣವಿ ಡಿ, ವಿಷ್ಣು ಆಗಿ ಶ್ರೀವಿಷ್ಣು ಕೆ.ಎಂ, ದೇವಿಯಾಗಿ ಶಿವಾನಿ ಕೂಡ್ಲು ಪಾತ್ರ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಅಡೂರ್ ಹರೀಶ್ ರಾವ್, ಮದ್ದಳೆಯಲ್ಲಿ ಪೃತ್ವಿ ಸಹಕರಿಸಿದರು. ವೇಷಭೂಷಣದಲ್ಲಿ ಶ್ರೀದುರ್ಗಾಂಬ ವೇಷಭೂಷಣ ಮಲ್ಲ ಸಹಕರಿಸಿದರು. ಕಳೆದ ವರ್ಷವೂ ಶಾಲಾಕಲೋತ್ಸವದಲ್ಲಿ ಕೂಡ್ಲುಶಾಲೆಗೆ ಪ್ರಥಮಸ್ಥಾನ ಲಭಿಸಿತ್ತು


