ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿ ಇದರ 45ನೇ ವಾರ್ಷಿಕೋತ್ಸವವು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಡಿ.28 ಶನಿವಾರ ಜರಗಲಿರುವುದು. ಪ್ರಾತಃಕಾಲ 6 ಕ್ಕೆ ಗಣಪತಿ ಹೋಮ, ದೀಪಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ. 10 ರಿಂದ ಕುಣಿತ ಭಜನೆ, 11 ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಭೋಜನ ಪ್ರಸಾದ. ಸಂಜೆ 5 ಕ್ಕೆ ತಾಯಂಬಕ, 6ಕ್ಕೆ ದೀಪಾರಾಧನೆ, ಭಜನೆ, 7 ಕ್ಕೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಉಲ್ಪೆ ಮೆರವಣಿಗೆ ಕುಣಿತ ಭಜನೆ, ಚೆಂಡೆಮೇಳದೊಂದಿಗೆ ಹೊರಡುವುದು, ರಾತ್ರಿ 9.30ಕ್ಕೆ ಶರಣಂ ವಿಳಿ, ಮಹಾಪೂಜೆ, ಪ್ರಸಾದ ವಿತರಣೆ. ರಾತ್ರಿ ರಿಂದ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ ಗಜೇಂದ್ರ ಮೋಕ್ಷ, ಪುರುಷಾಮೃಗ, ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

