HEALTH TIPS

ಏತಡ್ಕ ಸದಾಶಿವ ದೇವಸ್ಥಾನ ಪರಿಸರದಲ್ಲಿ ಚಿತ್ರಾರ್ಪಣಂ ಕಾರ್ಯಾಗಾರ

ಬದಿಯಡ್ಕ: ಚಿತ್ರ ರಚನೆಯಲ್ಲಿ ಆಸಕ್ತಿ ಇರುವವರಿಗಾಗಿ ಒಂದು ದಿನದ ಚಿತ್ರಾರ್ಪಣಂ ಕಾರ್ಯಾಗಾರ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಿಂದ ಶಿವಾರ್ಪಣಂ ಯೋಜನೆಯಂತೆ ಏತಡ್ಕ ದೇವಸ್ಥಾನದ ಸಮೀಪದ `ಪ್ರಕೃತಿ ಫಾಮ್ರ್ಸ್'ನಲ್ಲಿ ನಡೆಯಿತು.

ದೇವರ ಸಾನಿಧ್ಯದ ಸಂಕೇತವಾದ `ಓಂ' ಚಿತ್ರ ಬಿಡಿಸುವುದರ ಮೂಲಕ ಹಿರಿಯ ಕಲಾವಿದ ಬಾಲ ಮಧುರಕಾನನ ಉದ್ಘಾಟಿಸಿದರು. ಚಿತ್ರ ಶಿಬಿರಗಳಿಂದ ವೈಯಕ್ತಿಕ ಮಟ್ಟವನ್ನು ಸುಧಾರಿಸಲು ಸಾಧ್ಯ..ನಮ್ಮೊಳಗಿನ ಕೊರತೆಗಳನ್ನು ಕಂಡುಕೊಂಡು ಇನ್ನಷ್ಟು ಅಧ್ಯಯನದಲ್ಲಿ ತೊಡಗಬಹುದು. ಇನ್ನೊಬ್ಬರು ರಚಿಸುವ ರೀತಿ, ಬಳಸುವ ಮಾಧ್ಯಮ, ಸಾಮಗ್ರಿಗಳ ಅರಿವಾಗುತ್ತದೆ. ಬೇರೆಲ್ಲೂ ಈ ವಾತಾವರಣ ಇಲ್ಲ. ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಕಲೆ ಮತ್ತು ದೇವಸ್ಥಾನದ ಸಂಬಂಧವನ್ನು ಊರ್ಜಿತಗೊಳಿಸುವಲ್ಲಿನ ದೂರದರ್ಶಿತ್ವವನ್ನು ಪ್ರಶಂಸಿಸಲೇಬೇಕು ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಿತ್ರಕಲಾ ಅಧ್ಯಾಪಕ ಸತೀಶ್ ಮಾಸ್ತರ್ ವಾಣೀನಗರ ಹಾಗೂ ಹವ್ಯಕ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಮುಖ ಕುಳಮರ್ವ ಶ್ಯಾಮ ಪ್ರಸಾದ್ ಉಪಸ್ಥಿತರಿದ್ದರು. ಈ ಸಂದಭದಲ್ಲಿ ಚಿತ್ರಕಲಾ ಅಧ್ಯಾಪಕ ಸತೀಶ್ ಮಾಸ್ತರ್ ವಾಣೀನಗರ ಹಾಗೂ ಜಯಪ್ರಕಾಶ್ ಶೆಟ್ಟಿ ಮಂಜೇಶ್ವರ ಚಿತ್ರ ಬಿಡಿಸುವ ಪ್ರಾತ್ಯಕ್ಷಿಕೆ ನೀಡಿ ಮಾರ್ಗದರ್ಶನವಿತ್ತರು. ಕು.ಪೂರ್ವಿ ಕುಂಡಾಪು ಪ್ರಾರ್ಥನೆಗೈದಳು. ಸಮಿತಿಯ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇನ್ನೋರ್ವ ಸಂಯೋಜಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಹಾಗೂ ಕರ್ನಾಟಕದ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ಶಿವನ ಕುರಿತು ಚಿತ್ರ ಬಿಡಿಸಿದರು. ಶಿಬಿರಾರ್ಥಿಗಳಿಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಪ್ರಶಂಸಾ ಪತ್ರ ವಿತರಿಸಿದರು. ಅಧ್ಯಾಪಕ ನವೀನ್ ಮಾಸ್ತರ್ ಪುತ್ರಕಳ, ಮುರಳೀಧರ್ ಮಾಸ್ತರ್, ಹರೀಶ್ ಪಾಟಾಳಿ.ಬಿ.ಇಚ್ಲಂಪಾಡಿ ಚಿತ್ರಕಲಾ ಅಧ್ಯಾಪಕ ಸೋಮನಾಥನ್ ಮಾಸ್ತರ್, ಶಾಂತಿ, ಹರೀಶ್ ಮಾಸ್ತರ್ ನೀರ್ಚಾಲು, ಜಯಪ್ರಕಾಶ್ ಶೆಟ್ಟಿ ಮಂಜೇಶ್ವರ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries