HEALTH TIPS

ಬೆಮ್ಮರ್ ಮತ್ತು ಲೆಕ್ಕೆ ಸಿರಿ ಪಾಡ್ದನ, ಆಲಡೆಗಳು ಹಾಗೂ ಪ್ರಾದೇಶಿಕತೆಯ ಅಧ್ಯಯನದ ವಿಚಾರ ಸಂಕಿರಣ-ಪೂರ್ವಭಾವಿ ಸಭೆ 29 ರಂದು

ಮಂಗಳೂರು: ತುಳು ಭಾಷೆ ಮತ್ತು ಸಂಸ್ಕøತಿಯ ಅಧ್ಯಯನಕ್ಕೆ ಪೂರಕವಾಗಿ, ತುಳುನಾಡ ನೆಲದ ಆದಿಮೂಲ ದೈವಗಳಾದ ಬೆರ್ಮೆರ್ ಮತ್ತು ಲೆಕ್ಕೇಸಿರಿ  ಕುರಿತು  ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಾರ್ಚ್ ತಿಂಗಳಲ್ಲಿ ಹಮ್ಮಿಕೊಳ್ಳುತ್ತಿದ್ದು, ಎರಡು ಪ್ರಮುಖ ಗೋಷ್ಠಿಗಳನ್ನು ನಡೆಸಲಾಗುವುದು. ಬೆಮ್ಮರ್ ಮತ್ತು ಲೆಕ್ಕೆ ಸಿರಿ ಪಾಡ್ದನ, ಆಲಡೆಗಳು ಹಾಗೂ ಪ್ರಾದೇಶಿಕತೆಯ ಅಧ್ಯಯನ ಎಂಬ ಸಂಶೋಧನಾತ್ಮಕ ವಿಚಾರದ ಬಗ್ಗೆ ಪ್ರಬಂಧ ಮಂಡಿಸಲಾಗುವುದು ಮತ್ತು ದಾಖಲೀಕರಣ ಮಾಡಲಾಗುವುದು.  ಇದರಲ್ಲಿ ತುಳುನಾಡ ಜಾನಪದ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವುದಲ್ಲದೆ, ಬೇರೆ ರಾಜ್ಯಗಳಿಂದಲೂ ವಿದ್ವಾಂಸರು ಭಾಗವಹಿಸುವ ನಿರೀಕ್ಷೆ ಇದೆ. ದೇಶ ವಿದೇಶಗಳಿಂದ ಸುಮಾರು ನೂರಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಸ್ವೀಕರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಈ ತುಳು ರಾಷ್ಟ್ರೀಯ ವಿಚಾರ ಸಂಕಿರಣದ ವ್ಯವಸ್ಥಿತ ಅನುಷ್ಠಾನದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ಜ. 29 ಬುಧವಾರ ಪೂರ್ವಾಹ್ನ 11.ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಸದಸ್ಯರಲ್ಲದೆ ತುಳು ಜಾನಪದ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ವಿದ್ವಾಂಸರು ಈ ಸಭೆಯಲ್ಲಿ ಭಾಗವಹಿಸಿ, ತುಳು ರಾಷ್ಟ್ರೀಯ ವಿಚಾರ ಸಂಕಿರಣದ ಯಶಸ್ಸಿಗೆ ತಮ್ಮ ಅಮೂಲ್ಯ ಸಲಹೆ ಸೂಚನೆ ನೀಡಬೇಕಾಗಿ ಸಂಘಕರು ವಿನಂತಿಸಿದ್ದಾರೆ. 


    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries