ಬದಿಯಡ್ಕ: ಕೊಲ್ಲಂಗಾನ ಅರ್ತಲೆ ಶ್ರೀ ರಕ್ತೇಶ್ವರಿ ನಾಗ ಗುಳಿಗ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ ಕುಂಭಲಗ್ನ ಶುಭಮುಹೂರ್ತದಲ್ಲಿ ಶ್ರೀ ರಕ್ತೇಶ್ವರಿಯ ನೂತನ ಪೀಠ ಪ್ರತಿಷ್ಠೆ, ಆಯುಧಗಳ ಪ್ರತಿಷ್ಠೆ, ಗುಳಿಗನ ಶಿಲಾ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ವೇದಮೂರ್ತಿ ಗಣೇಶ್ ಭಟ್ ಮುಂಡೋಡು ಅವರ ಪೌರೋಹಿತ್ಯದಲ್ಲಿ ತಾಂತ್ರಿಕ ವಿಧಿವಿಧಾನಗಳೊಂದಿಗೆ ಜರಗಿತು.
ಬೆಳಗ್ಗೆ ಆರಂಭವಾದ ಶ್ರೀ ಚಂಡಿಕಾ ಹೋಮದ ಪೂರ್ಣಾಹುತಿಯ ಸಂದರ್ಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಭಾನುವಾರ ಬೆಳಗ್ಗೆ ನಾಗಸನ್ನಿಧಿಯಲ್ಲಿ ನಾಗಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಆಶ್ಲೇಷ ಬಲಿ ಸೇವೆ, ಪ್ರಸಾದ ವಿತರಣೆ ಜರಗಿತು. ವಿವಿಧ ಸಂಘಟನೆಗಳ ವತಿಯಿಂದ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಭಜನೆ ನಡೆಯಿತು. ವಿದುಷಿ ಯೋಗೀಶ್ವರಿ ಜಯಪ್ರಕಾಶ್ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರ ವಿದ್ಯಾರ್ಥಿಗಳಿಂದ `ನೃತ್ಯಾರ್ಪಣಂ' ಜನಮನಸೂರೆಗೊಂಡಿತು.

.jpg)
