ಮಂಜೇಶ್ವರ: ಕೋಡಿ ಬಂಗೇರ ಕುಟುಂಬಸ್ಥರ ಮೂಲಸ್ಥಾನ ಕೋಡಿ ಮೀಯಪದವಲ್ಲಿ ಜ.26 ರಂದು ಭಾನುವಾರದಿಂದ ಜ.29 ರ ಬುಧವಾರದ ವರೆಗೆ ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನ ಕೋಡಿಯಲ್ಲಿ ಮೂಲಸ್ಥಾನ ತಂತ್ರಿವರ್ಯ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಅವರ ಮಾರ್ಗದರ್ಶನದಲ್ಲಿ ಮತ್ತು ರಕ್ತೇಶ್ವರಿ ದೈವದ ಶಿವಪ್ರಸಾದ್ ಭಟ್ ಕೋಡಿ ಇವರ ಉಪಸ್ಥಿತಿಯಲ್ಲಿ ಕೋಡಿ ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನದ ದೈವಗಳ "ಧರ್ಮನೇಮೋತ್ಸವ" ನಡೆಯಲಿದೆ. ಧರ್ಮನೇಮೋತ್ಸವಕ್ಕೆ ಪೂರ್ವಭಾವಿಯಾಗಿ ಭಾನುವಾರ ಕುಟುಂಬದ ಹಿರಿಯರ ಮತ್ತು ಶಿವಪ್ರಸಾದ್ ಭಟ್ ಕೋಡಿ ಇವರ ಉಪಸ್ಥಿತಿಯಲ್ಲಿ ಗೊನೆ ಮುಹೂರ್ತ ನೆರವೇರಿತು ಸಂಜೆ 4 ಕ್ಕೆ ತುಳುನಾಡಿನ ಸಾಂಪ್ರದಾಯಿಕ ದೈವಗಳ ನೇಮೋತ್ಸವದ ಪ್ರಯುಕ್ತ "ಕೋಳಿಗುಂಟ" ಶಾಸ್ತ್ರೋತ್ತವಾಗಿ ನೆರವೇರಿತು.
ಜ.26 ರಂದು ಭಾನುವಾರ ಬೆಳಗ್ಗೆ 8.30ಕ್ಕೆ ಗಣಪತಿ ಹೋಮ 9.30ಕ್ಕೆ ನಾಗತಂಬಿಲ 10.30ಕ್ಕೆ "ಆಶ್ಲೇಶಬಲಿ ಮತ್ತು ದುರ್ಗಾಪೂಜೆ" , ದೈವಗಳಿಗೆ ತಂಬಿಲ, 12. 30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, 1 ಕ್ಕೆ ಅನ್ನ ಸಂತರ್ಪಣೆ,ಅಪರಾಹ್ನ 3ಕ್ಕೆ ಚಪ್ಪರ ಏರುವುದು, 5ಕ್ಕೆ ಕೋಡಿ ರಕ್ತೇಶ್ವರಿ ಸನ್ನಿದಿಯಿಂದ ದೈವದ ಭಂಡಾರ ಹೊರಡುವುದು 6ಕ್ಕೆ ಭಂಡಾರ ಏರುವುದು, ತಂಬಿಲ ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆ, 9 ರಿಂದ "ರಕ್ತೇಶ್ವರಿ ದೈವದ ನೇಮೋತ್ಸವ" ನಡೆಯಲಿದೆ.
ಜ. 27 ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ದೈವಗಳ ಭಂಡಾರ ಏರುವುದು, ತಂಬಿಲ 11 ರಿಂದ ಅರಸು "ಮುಡಿಪ್ಪಿನಾರ್ ದೈವದ ನೇಮೋತ್ಸವ", 1.30ಕ್ಕೆ ಅನ್ನ ಸಂತರ್ಪಣೆ,ಸಂಜೆ 4 ರಿಂದ ಧರ್ಮ ದೈವ ಮಲರಾಯ ದೈವದ ಮತ್ತು ಭಂಟ ದೈವದ ನೇಮೋತ್ಸವ, ರಾತ್ರಿ 7.30ರಿಂದ ಅನ್ನಸಂತರ್ಪಣೆ, 8 ರಿಂದ ಪಿಲಿಚಾಮುಂಡಿ ದೈವದ ನೇಮೋತ್ಸವ, 11ರಿಂದ ಮಲಾರ್ದ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.
ಜ. 28 ರಂದು ಮಂಗಳವಾರ. ಸಂಜೆ 4 ಕ್ಕೆ ದೈವಗಳ ಭಂಡಾರ ಏರುವುದು, ತಂಬಿಲ, 5 ರಿಂದ ವರ್ಣಾರ ಪಂಜುರ್ಲಿ ದೈವದ ನೇಮೋತ್ಸವ, 7.30ರಿಂದ ಅನ್ನ ಸಂತರ್ಪಣೆ, ರಾತ್ರಿ 8 ರಿಂದ ಬಂಧು ಕಲ್ಲುರ್ಟಿ ದೈವದ ಕೋಲ, 10 ರಿಂದ ಕೊರತಿ ದೈವದ ಕೋಲ, 12 ರಿಂದ ಮುಕಾಂಬಿ ಗುಳಿಗ ದೈವದ ಕೋಲ ನಡೆಯಲಿದೆ.
ಜ. 29 ರಂದು ಬುಧವಾರ ಸಂಜೆ 6ರಿಂದ ಕುಪ್ಪೆ ಪಂಜುರ್ಲಿ ಮತ್ತು ಕುಟುಂಬದ ಕಲ್ಲುರ್ಟಿ ದೈವದ ಕೋಲ, 7.30 ರಿಂದ ಅನ್ನ ಸಂತರ್ಪಣೆ, ರಾತ್ರಿ 11 ರಿಂದ ರಾಹುಗುಳಿಗ ದೈವದ ಕೋಲ ನಡೆಯಲಿದೆ. ಜ. 30 ರಂದು ಗುರುವಾರ ರಾತ್ರಿ ಪಿರಿ ತಂಬಿಲದೊಂದಿ ಧರ್ಮನೇಮೋತ್ಸವ ಸಮಾಪ್ತಿಗೊಳ್ಳಲಿದೆ.

.jpg)
.jpg)
