ಕಾಸರಗೋಡು: ಪ್ರಾಚ್ಯವಸ್ತು ಇಲಾಖೆ ಅದಿನದಲ್ಲಿರುವ ಇತಿಹಾಸಪ್ರಸಿದ್ಧ ಆರಿಕ್ಕಾಡಿ ಕೋಟೆಯಲ್ಲಿ ನಿಧಿಗಾಗಿ ಶೋಧ ನಡೆಸಿದ ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮೊಗ್ರಾಲ್‍ಪುತ್ತೂರು ಪಂಚಾಯಿತಿ ಸಮಿತಿ ವತಿಯಿಂದ ಬ್ರಹತ್ ಪ್ರತಿಭಟನಾ ಧರಣಿ ಮಂಗಳವಾರ ನಡೆಯಿತು. ಧರಣಿಗೆ ಮೊದಲು
ಚೌಕಿ ಜಂಕ್ಷನ್‍ನಿಂದ ಪಂಚಾಯಿತಿ ಕಚೇರಿವರೆಗೆ ಮುಜೀಬ್‍ಕಂಬಾರ್ ಪ್ರತಿಕೃತಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ನಡೆದ ಧರಣಿಯನ್ನು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಶ್ರೀ ಗುರು ಪ್ರಸಾದ್ ಪ್ರಭು ಉದ್ಘಾಟಿಸಿದರು. ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಧನಂಜಯ ಮಧೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ಕುದ್ರೆಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ಉಮೇಶ್ ಕಡಪ್ಪುರ, ಮಹಿಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಪ್ರಿಯಾ, ಮೊಗ್ರಾಲ್ ಪುತ್ತೂರು ಗ್ರಾಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್, ಜನಪ್ರತಿನಿಧಿಗಳಾದ ಸಂಪತ್ ಕುಮಾರ್, ಮಲ್ಲಿಕಾ, ಸುಲೋಚನಾ ಮತ್ತು ಗಿರೀಶ್ ಉಪಸ್ಥಿತರಿದ್ದರು.
ಪವಿತ್ರ ಅರಿಕ್ಕಾಡಿ ಶ್ರೀ ಹನುಮಾನ್ ಕೋಟೆಗೆ ಅತಿಕ್ರಮಿಸಿರುವುದಲ್ಲದೆ, ಕೋಟೆಯೊಳಗಿನ ಪಾಳುಬಾವಿಯಲ್ಲಿ ಇದೆಯೆನ್ನಲಾದ ನಿಧಿ ಲೂಟಿಗೆ ಯತ್ನಿಸಿರುವುದನ್ನು ಖಂಡಿಸಿ ಪ್ರತಿಭಟನೆ ಅಯೋಜಿಸಲಾಗಿತ್ತು. ಈ ಸಂದರ್ಭ ಮುಜೀಬ್ ಕಂಬಾರ್ ಅವರ ಪ್ರತಿಕೃತಿ ದಹಿಸಲಾಯಿತು.


