ಪೆರ್ಲ: ಪೆರ್ಲ ಪೇಟೆಯ ಚೆಕ್ಪೋಸ್ಟ್ ವಠಾರದಲ್ಲಿ ಅಂತಾರಾಜ್ಯ ಹೆದ್ದಾರಿಗೆ ಹೊಂದಿಕೊಂಡು ತಲೆಯೆತ್ತಿರುವ 'ಶ್ರೀಮಾತಾ ಆರ್ಕೇಡ್' ವಾಣಿಜ್ಯ ಸಂಕೀರ್ಣವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸೋಮವಾರ ನೆರವೇರಿಸಿದರು.
ಈ ಸಂದರ್ಭ ಆಶೀರ್ವಚನ ನೀಡಿದ ಅವರು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುವುದಲ್ಲದೆ, ಸಾಂಸ್ಕøತಿಕ ಪುರೋಗತಿಗೂ ಹಾದಿಮಾಡಿಕೊಡುವುದಾಗಿ ತಿಳಿಸಿದರು. ಎಣ್ಮಕಜೆ ತರವಾಡುಮನೆಯ ಸುಧೀರ್ ಕುಮಾರ್ ಶೆಟ್ಟಿ, ಧಾರ್ಮಿಕ, ಸಾಮಾಜಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಡಳಿತ ಮೊಕ್ತೇಸರ ತಾರಾನಾಥ ರೈ ಕಾಟುಕುಕ್ಕೆ, ಡಾ. ಶ್ರೀಪತಿ ಕಜಂಪಾಡಿ, ಸಣ್ಣ ಕೈಗಾರಿಕಾ ಸಂಘಗಳ ಒಕ್ಕೂಟ ಜಿಲ್ಲಾಧ್ಯಕ್ಷ ರಾಜಾರಾಮ ಎಸ್ ಪೆರ್ಲ, ಪುರೋಹಿತ ತಿರುಮಲೇಶ್ವರ ಭಟ್, ಸಂಸ್ಥೆ ಅಡಳಿತ ಪಾಲುದಾರರಾದ ಶಿವಸುಬ್ರಹ್ಮಣ್ಯ ಭಟ್ ಶುಳುವಾಲಮೂಲೆ, ಉದಯ ಚೆಟ್ಟಿಯಾರ್ ಬಜಕೂಡ್ಲು ಹಾಗೂ ನಾರಾಯಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಶತರುದ್ರಾಭಿಷೇಕ, ಗಣಪತಿ ಹವನ, ಶತರುದ್ರ ಹೋಮ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತುಬಲಿ ನಡೆಯಿತು. ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಲಮೂಲೆ ನೇತೃತ್ವ ವಹಿಸಿದ್ದರು.
ಪುರುಷೋತ್ತಮ ಬಿ.ಎಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಜಿ ಆಟ್ರ್ಸ್ನ ಸುಜಿತ್ ಬಜಕೂಡ್ಲು ವಂದಿಸಿದರು.
ಸುಸಜ್ಜಿತ ಹಾಗೂ ಬಹು ಅಂತಸ್ತಿನ ಶ್ರಿಮಾತಾ ಆರ್ಕೇಡ್ನಲ್ಲಿ ಶುದ್ಧ ಸಸ್ಯಾಹಾರಿ ಹೋಟೆಲ್, ವಸತಿಗೃಹ, ಮಿನಿ ಸಭಾಂಗಣ, ಬಟ್ಟೆ ಅಂಗಡಿ, ವೈದ್ಯರ ಕ್ಲಿನಿಕ್, ವಿವಿಧ ಕಚೇರಿ, ಡಿಜಿಟಲ್ ಪ್ರಿಂಟಿಂಗ್-ಪ್ಲೆಕ್ಸ್ ಬೋರ್ಡ್ ತಯಾರಿ ಸಂಸ್ಥೆ, ವಾಹನಗಳ ಬಿಡಿಭಾಗ ಮಾರಾಟ ಕೇಂದ್ರ ಸೇರಿದಂತೆ ವಿವಿಧ ವ್ಯಾಪಾರಿ ಮಳಿಗೆ ಕಾರ್ಯಾಚರಿಸುತ್ತಿದೆ.



