ಪೆರ್ಲ: ನಾಲ್ಕು ಗ್ರಾಮಗಳ ದೇವರಾದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ದೇವಸ್ಥಾನದಲ್ಲಿ ಮೇ 05 ರಿಂದ 12 ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ನಡೆಯಬೇಕಾದ ಜೀರ್ಣೋದ್ಧಾರ ಕೆಲಸ, ಅಭಿವೃದ್ಧಿ ಕಾರ್ಯ, ಉತ್ಸವದ ಅಂಗವಾಗಿ ನಡೆಯಬೇಕಾದ ಇತರ ಕೆಲಸ ಕಾರ್ಯಗಳಿಗೆ ಫೆ. 23ರಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಹಾಗೂ ಕ್ಷೇತ್ರ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ 'ಪರ್ವ ಸನ್ನಾಹ' ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿದ್ಯುಕ್ತ ಚಾಲನೆ ದೊರೆಯಲಿದೆ.
ಈ ಸಂದರ್ಭ ಸತ್ಕರ್ಮದ ಶ್ರೇಯಸ್ಸಿಗಾಗಿ, ನಾಲ್ಕೂ ಗ್ರಾಮಗಳ ಭಕ್ತಜನತೆಗೆ ಈ ಸತ್ಕರ್ಮವನ್ನು ಯಶಸ್ವಿಯಾಗಿ ಮುನ್ನಡೆಸುವ ಶಕ್ತಿ ಪ್ರಾಪ್ತಿಗಾಗಿ 'ಶತರುದ್ರಾಭೀಷೇಕ, ಬಲಿವಾಡು ಕೂಟ ನಡೆಯಲಿರುವುದು. ನಾಲ್ಕು ಗ್ರಾಮಗಳ ಭಕ್ತಜನರ ಪಾಲ್ಗೊಳ್ಳುವಿಕೆಯೊಂದಿಗೆ ಉತ್ಸವವನ್ನು ಒಗ್ಗಟ್ಟಾಗಿ ಮಾಡುವ ಮಹಾಧ್ಯೇಯದ ಸಾಕಾರಕ್ಕಾಗಿ ಪ್ರತಿಯೊಬ್ಬ ಭಕ್ತನಿಂದ ಭಗವಂತನಿಗೆ ಕಾಣಿಕೆ ಸಮರ್ಪಣೆ, ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಇತ್ಯಾದಿ ಕಾರ್ಯಕ್ರಮ ನಡೆಯಲಿರುವುದು.



