ಬದಿಯಡ್ಕ: ಕಲಿಯುಗದಲ್ಲಿ ಭಜನೆಯ ಮೂಲಕ ದೇವರನ್ನು ಸ್ತುತಿಸುವ ಭಕ್ತನಿಗೆ ಭಗವಂತ ಬೇಗನೆ ಒಲಿಯುತ್ತಾನೆ. ಭಜನೆಯು ಕಷ್ಟಕಾರ್ಪಣ್ಯಗಳನ್ನು ದೂರಮಾಡಿ ಬಾಳಿಗೆ ನೆಮ್ಮದಿಯನ್ನು ನೀಡುತ್ತದೆ. ಆರಾಧನಾಲಯಗಳ ವಿಶೇಷ ದಿನಗಳಲ್ಲಿ ಭಜನೆಗೆ ವಿಶೇಷ ಪರಿಗಣನೆಯನ್ನು ನೀಡುತ್ತಿರುವುದು ಸ್ತುತ್ಯರ್ಹವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ದೇವರನ್ನು ಪ್ರಾರ್ಥಿಸಿದಾಗ ಅಲ್ಲಿ ದೈವಾನುಗ್ರಹ ಉಂಟಾಗುತ್ತದೆ. ಭಜನೆಯ ಮೂಲಕ ಭಗವಂತನ ಸಾಮೀಪ್ಯ ಎಂದು ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನ ಮಂಗಳವಾರ ರಾತ್ರಿ ಸಾಮಗಾನಪ್ರಿಯ ವೇದಿಕೆಯಲ್ಲಿ ಭಜನಾರ್ಪಣಮ್‍ಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಮಾತನಾಡಿ, ಅಚ್ಚುಕಟ್ಟಾದ ವ್ಯವಸ್ಥೆಯ ಮೂಲಕ ಏತಡ್ಕ ಸದಾಶಿವ ದೇವಸ್ಥಾನವು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಮಾನವನನ್ನು ಮಾಧವನನ್ನಾಗಿಸುವ ಭಜನೆ, ಅಸುರಶಕ್ತಿಗಳನ್ನು ನಿವಾರಿಸಿ ದೈವಿಕ ಶಕ್ತಿಯನ್ನು ನೀವುದೂ ಭಜನೆ. ಮನುಷ್ಯ ದೇಹದ ಸಕಲ ರೋಗಗಳಿಗೂ ಭಜನೆ ರಾಮಬಾಣವಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ಯಾಮ ಭಟ್ ಏತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಷಾ ಶಿವರಾಮ ಭಟ್ ಕಾರಿಂಜ ಹಳೆಮನೆ, ಚಂದ್ರಶೇಖರ ಭಟ್ ಏತಡ್ಕ ನಿರೂಪಿಸಿದರು.
* ಭಕ್ತಮಾಕರ್ಂಡೇಯ ಪ್ರತಿಮೆಗೆ ರುದ್ರಾಕ್ಷಿ ಮಾಲೆ ಅರ್ಪಿಸಿದ ಗಣ್ಯರು
* ಉದ್ಘಾಟನೆಯ ನಂತರ ವಿವಿಧ ಭಜನ ಸಂಘಗಳಿಂದ ಭಜನೆ ನಡೆಯಿತು.
* ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರು ಶಿಷ್ಯಂದಿರೊಂದಿಗೆ ಭಜನ ಸಂಕೀರ್ತನೆಗೆ ಧ್ವನಿಗೂಡಿಸಿದರು.

.jpg)
.jpg)

