HEALTH TIPS

ಕ್ಷೇತ್ರಗಳ ಪರಿಪಾಲನೆ ಮೂಲಕ ಸನಾತನ ಧರ್ಮಕ್ಕೆ ಶಕ್ತಿ ನೀಡುವಂತಾಗಬೇಕು: ಮಾಣಿಲ ಶ್ರೀ

ಬದಿಯಡ್ಕ : ಪ್ರತಿಯೊಂದು ಕಡೆಯೂ ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ಪರಿಪಾಲನೆಯ ಮೂಲಕ ನಮ್ಮ ಸತಾನದ ಧರ್ಮಕ್ಕೆ ಶಕ್ತಿ ನೀಡುವಂತಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಅವರು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಶ್ರೀ ಉಮಾಮಹೇಶ್ವರ ಮತ್ತು ಸಪರಿವಾರ ದೇವರ ಶುಕ್ರವಾರ ನಡೆದ ಪ್ರತಿಷ್ಠೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚ ನೀಡಿದರು.

ಬಹಳಷ್ಟು ಕ್ಷೇತ್ರಗಳು ಜೀರ್ಣೋದ್ಧಾರಗೊಂಡಿದೆ. ಈ ಮೂಲಕ ಸತ್ಕರ್ಮಗಳು ನಡೆಯುತ್ತಿದೆ.  ಮತ್ತೊಂದಡೆ ಸಂಘರ್ಷದ ವಾತರಣವೂ ಇದೆ. ಈ ಬಗ್ಗೆ ಹಿಂದೂ ಸಮಾಜ ಯೋಚಿಸಬೇಕು. ಕ್ಷೇತ್ರಗಳಲ್ಲಿನ ಪ್ರಸಾದಕ್ಕೂ ಅದೇ ರೀತಿಯಲ್ಲಿ ಭಜನೆಗಳಿಗೆ ಅದರದ್ದೇ ಆದ ಮಹತ್ವವಿದೆ ಅದರ ಬಗ್ಗೆ ಅರಿತುಕೊಳ್ಳಬೇಕು.  ಎಲ್ಲಾ ಕ್ಷೇತ್ರಗಳಲ್ಲೂ ಧರ್ಮ ಶಿಕ್ಷಣ ನೀಡುವಂತಾಗಬೇಕು. ಆ ಮೂಲಕ ಸನಾತನ ಧರ್ಮ ಉದ್ಘಾರದಲ್ಲಿ ತೊಡಗಿಸಿಕೊಳಳಬೇಕು ಎಂದು ಅವರು ಹೇಳಿದರು.


ಸಭಾ ಕಾರ್ಯಕ್ರಮದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರ್ಮಿಕ ಉಪನ್ಯಾಸವನ್ನು ಕಾಸರಗೋಡು ಆರ್‍ಎಸ್‍ಎಸ್ ಜಿಲ್ಲಾ ಕಾರ್ಯವಾಹ ಪವಿತ್ರನ್ ಕೆ.ಕೆ.ಪುರಂ ಮಾಡಿದರು.

ಅಭ್ಯಾಗತರಾದ  ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಮಾತನಾಡಿ, ನಮ್ಮ ಪ್ರತಿಯೊಂದೂ ಆಚಾರ-ವಿಚಾರಗಳಲ್ಲಿ ಭರವಸೆಯನ್ನು ಹೊಂದಿರಬೇಕು. ಪಾಶ್ಚತ್ಯರು ಭಾರತೀಯರ ವಿಚಾರಧಾರೆಯನ್ನು ಮೆಚ್ಚಿ ಅನುಕರಣೆಯನ್ನು ಮಾಡುತ್ತಿದ್ದಾರೆ. ನಮ್ಮ ಸನಾತನ ಧರ್ಮದ ಕುರಿತು ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ ಇದೊಂದು ಒಳ್ಳೆಯ ಸೂಚನೆಯಾಗಿದೆ. ಪ್ರಸ್ತುತ ಕಾಸರಗೋಡಿನಾದ್ಯಂತ ಆನೇಕ ಕ್ಷೇತ್ರಗಳು ಜೀರ್ಣೋದ್ಧಾರಗೊಂಡಿದೆ. ಒಳ್ಳೆಯದನ್ನು ಬಯಸಿದ್ದರೆ ಅದು ಸದಾಕಾಲ ಜನತೆಗೆ ಸುಭೀಕ್ಷೆಯನ್ನು ನೀಡುತ್ತದೆ ಎಂದರು.


ಈ ಸಂದರ್ಭದಲ್ಲಿ ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಅರ್ಚಕ ದಿನೇಶ್ ಭಟ್, ಪದ್ಮಶ್ರೀ ವಿಜೇತ ಸತ್ಯನಾರಾಯಣ ಬೆಳೇರಿ, ಉದ್ಯಮಿ ರಂಗನಾಥ ರಾವ್ ಮುಳ್ಳೇರಿಯಾ, ಆರ್‍ಎಸ್‍ಎಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ನಾಯರ್ ಬೋವಿಕ್ಕಾನ, ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜೆ, ಬ್ರಹ್ಮಕಲಶೋತ್ಸವ ಉಪಾಧ್ಯಕ್ಷ, ಉದ್ಯಮಿ ಮಧುಸೂದನ ಆಯರ್, ನ್ಯಾಯವಾದಿ ಶಿವದಾಸ ರೈ, ಜಿಪಂ ಸದಸ್ಯೆ ಶೈಲಜಾ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ,  ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ಕುಂuಟಿಜeಜಿiಟಿeಜರಾಮನ್ ಗೋಸಾಡ ಮತ್ತಿತರರು ಮಾತನಾಡಿದರು.


ಆರಂಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಸಂಚಾಲಕ ಹರಿನಾರಾಯಣ ಶಿರಂತಡ್ಕ  ನಿರೂಪಿಸಿ ಗೋಪಾಲಕೃಷ್ಣ ಮುಂಡೋಳುಮೂಲೆ ವಂದಿಸಿದರು. ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ ಕಾರ್ಯಕ್ರಮ ನಿರ್ವಹಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries