ಕಾಸರಗೋಡು: ದ್ವಿಚಕ್ರ ವಾಹನ, ಲ್ಯಾಪ್ಟಾಪ್, ಹೊಲಿಗೆ ಯಂತ್ರಗಳನ್ನು ಅರ್ಧ ಕ್ರಯಕ್ಕೆ ನೀಡುವ ವಂಚನಾ ಜಾಲದಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ಹಲವು ಮಂದಿ ಹಣ ಹೂಡಿಕೆಮಾಡಿ ವಂಚನೆಗೀಡಾಗಿದ್ದಾರೆ. ಸಾಯಿಗ್ರಾಮ ಗ್ಲೋಬಲ್ ಟ್ರಸ್ಟ್ ನಿರ್ದೇಶಕ ಆನಂದಕುಮಾರ್ ಅವರ ಮೂಲಕ ವಂಚನಾಜಾಲದ ಕೊಂಡಿ ಅನಂತಕೃಷ್ಣನನ್ನು ಪರಿಚಯಗೊಂಡಿರುವ ಸಾಮಾಜಿಕ ಸಂಘಟನೆಗಳ ಸದಸ್ಯರು ವಂದನೆಗೀಡಾದವರು.
ಕುಂಬ್ಡಾಜೆಯ ಮೈತ್ರಿ ವಾಚನಾಲಯ, ಕಾಞಂಗಾಡು ಮೋನಚ್ಚದ ಸೋಶ್ಯೋ ಎಕನಾಮಿಕ್ ಡೆವೆಲಪ್ಮೆಂಟ್ ಸೊಸೈಟಿ ಹಾಗೂ ಕಾಸರಗೋಡು ನಗರ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಸಂಸ್ಥೆ ಸದಸ್ಯೆಯರು ಹಣ ಕಳೆದುಕೊಂಡವರು. ಕುಂಬ್ಡಾಜೆಯ ಮೈತ್ರಿ ವಾಚನಾಲಯದ ತಲಾ 36ಮಂದಿ ದ್ವಿಚಕ್ರ ವಾಹನ ಹಾಗೂ ಲ್ಯಾಪ್ಟಾಪ್ಗಾಗಿ ಒಟ್ಟು ಮೊತ್ತದ ಅರ್ಧ ಹಣ ನೀಡಿದ್ದಾರೆ. ಈ ಮೂಲಕ ಸುಮಾರು 30ಲಕ್ಷ ರೂ. ನಷ್ಟ ಉಂಟಾಗಿರುವುದಾಗಿ ಸಮಿತಿ ಕಾರ್ಯದರ್ಶಿ ಶರೀಪ್ ದೂರಿನಲ್ಲಿ ತಿಳಿಸಿದ್ದಾರೆ. ಅದೇ ರಈತಿಯಲ್ಲಿ ಮೊನಚ್ಚಾದ ಸಾಮಾಜಿಕ ಸಂಘಟನೆಯಿಂದಲೂ 41ಲಕ್ಷ ಹಾಗೂ ಕಾಸರಗೋಡಿನ ಸಂಸ್ಥೆಯಿಂದಲೂ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ದ್ವಿಚಕ್ರವಾಹನ, ಲ್ಯಾಪ್ಟಾಪ್ ಸೇರಿದಂತೆ ವಿವಿಧ ಸಾಮಗ್ರಿಯನ್ನು ಸಿಎಸ್ಆರ್ ಫಂಡ್ ಮೂಲಕ ಅರ್ಧ ಬೆಲೆಗೆ ಪೂರೈಸುವ ಭರವಸೆಯೊಂದಿಗೆ ರಾಜ್ಯಾದ್ಯಂತ ಕೋಟ್ಯಂತರ ರೂ. ವಂಚನೆಯೆಸಗಿರುವ ಬಗ್ಗೆ ದೂರು ದಾಖಲಾಗುತ್ತಿದೆ.



