ಕಾಸರಗೋಡು: ಬಿಜೆಪಿ ಕುತ್ತಿಕ್ಕೋಲ್ ಪಮಚಾಯಿತಿ ಸಮಿತಿಗಾಗಿ ಬಂದಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಬಿಜೆಪಿ ಪಂಚಾಯಿತಿಸಮಿತಿ ಕಚೇರಿಯನ್ನು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್‍ಗೋಪಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೇರಳದಲ್ಲಿ ಬಿಜೆಪಿ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮುತ್ತಿದ್ದು, ಕಾರ್ಯಕರ್ತರಿಗೆ ಹೆಚ್ಚಿನ ಹುರುಪಿನೊಂದಿಗೆ ಕೆಲಸ ಮಾಡಲು ಇದು ಸಹಕಾರಿಯಾಗಲಿದೆ. ಕೇಂದ್ರದ ಯೋಜನೆಗಳ ಬಗ್ಗೆ ತಳಮಟ್ಟದ ಜನತೆಗೆ ಮಾಹಿತಿ ನೀಡಲು ಕಾರ್ಯಕರ್ತರು ಮುಂದಾಗಬೇಕು. ಈ ಮೂಲಕ ಕೇಂದ್ರದ ನರೇಂದ್ರಮೋದಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯಬೇಕು ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್ ಅಶ್ವಿನಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಮಹೇಶ್‍ಗೋಪಾಲ್, ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್, ಪ್ರಮಿಳಾ ಸಿ.ನಾಯ್ಕ್, ಎ. ವೇಲಾಯುಧನ್, ಮನುಲಾಲ್ ಮೇಲತ್ತ್, ದಿಲೀಪ್ ಪಳ್ಳಂಜಿ, ಶಶಿಕುಮಾರ್, ಜಯಕುಮಾರ್, ರಾಧಾಕೃಷ್ಣನ್ ನಂಬ್ಯಾರ್, ಚರಣ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


