ಕಾಸರಗೋಡು : ಜಿಲ್ಲಾ ಎಂಪ್ಲಾಯ್‍ಮೆಂಟ್ ಎಕ್ಸ್‍ಚೇಂಜ್ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಪ್ಲಾಯಬಿಲಿಟಿ ಕೇಂದ್ರದ ನೇತೃತ್ವದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಏ.16ರಂದು ಬೆಳಗ್ಗೆ 10.30ರಿಂದ ವಿದ್ಯಾನಗರದ ಜಿಲ್ಲಾ ಎಂಪ್ಲಾಯಬಿಲಿಟಿ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಪ್ರಮುಖ ಸಂಸ್ಥೆಗಳಲ್ಲಿ ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್,ಬಿಸಿನೆಸ್ ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್, ಅಡ್ಮಿನಿಸ್ಟ್ರೇಷನ್ ಎಕ್ಸಿಕ್ಯೂಟಿವ್, ಅಕಾಡೆಮಿಕ್ ಕೌನ್ಸಿಲರ್ ಎಂಬ 10ಕ್ಕೂ ಹೆಚ್ಚು ತೆರವಾಗಿರುವ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವುದು. ಎಂಪ್ಲಾಯಬಿಲಿಟಿ ಸೆಂಟರ್‍ನಲ್ಲಿ ನೋಂದಾಯಿಸಿಕೊಂಡವರಿಗೆ ಅವಕಾಶವಿದ್ದು, ನೋಂದಣಿಯಾಗದ ಉದ್ಯೋಗಾರ್ಥಿಗಳಿಗೆ ಅಂದು ಬೆಳಗ್ಗೆ 10 ಗಂಟೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9207155700)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


