ಕಾಸರಗೋಡು: ಆದೂರು ಅಬಕಾರಿ ಚೆಕ್‍ಪೋಸ್ಟ್‍ನಲ್ಲಿ ಅಬಕಾರಿ ಇಲಾಖೆ ಅದಿಕಾರಿಗಳು ತಪಾಸಣೆಗಾಗಿ ಸೂಚನೆ ನೀಡಿದರೂ, ನಿಲ್ಲಿಸದೆ ಪರಾರಿಯಾಗಲೆತ್ನಿಸಿದ ಸಂದರ್ಭ ಅಪಘಾತಕ್ಕೀಡಾದ ಕಾರಿನಿಂದ ಚಿನ್ನ, ಬೆಳ್ಳಿ, ನಗದು, ಮೊಬೈಲ್ ಹಾಗೂ ಮಾರಕಾಯುಧ ಪತ್ತೆಹಚ್ಚಿದ ಪ್ರಕರಣದಲ್ಲಿ ನಾಲ್ಕು ಮಂದಿ ಶಾಮೀಲಾಗಿರುವುದಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.
ಅಪಘಾತಕ್ಕೀಡದ ಕಾರಿನಿಂದ 140.6ಗ್ರಾಂ ಚಿನ್ನ, 339.2ಗ್ರಾಂ ಬೆಳ್ಳಿ, 101700ರೂ.ನಗದು, ನಾಲ್ಕು ಮೊಬೈಲ್, ನಾಲ್ಕು ಎಟಿಎಮ ಕಾರ್ಡುಘಲೂ, ಎರಡು ಸುತ್ತಿಗೆ, ಒಡೆದ ಬೀಗ ಪತ್ತೆಹಚ್ಚಲಾಗಿದೆ. ಇವು ಕಳವುಗೈದ ವಸ್ತುಗಳಾಗಿರಬೇಕೆಂದು ಪೊಲೀಸರು ಸಂಶಯ ವಯಕ್ತಪಡಿಸಿದ್ದಾರೆ.
ವಶಪಡಿಸಿಕೊಮಡಿರುವ ಎಟಿಎಂ ಕಾರ್ಡುಗಳಲ್ಲಿ ಒಂದು ಕುಖ್ಯಾತ ಕಳವು ಆರೋಪಿ, ಬೆಂಗಳೂರು ನಿವಾಸಿ ಯಾಸಿಮ್‍ಖಾನ್ ಎಂಬಾತನದ್ದೆಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಈತ ಕಳವು ತಂಡದ ಪ್ರಮುಖ ಸೂತ್ರಧಾರನೆನ್ನಲಾಗಿದೆ. ತಂಡ ಸಂಚರಿಸಿದ ಕಾರು ಮಹಾರಾಷ್ಟ್ರ ನೋಂದವಣೆ ಹೊಂದಿದ್ದು, ಇದಕ್ಕೆ ಕರ್ನಾಟಕ ನೋಂದಾವಣೆಯ ನಕಲಿ ನಂಬರ್‍ಪ್ಲೇಟ್ ಅಳವಡಿಸಲಾಗಿದೆ. ಎಟಿಎಂ ಕಾರ್ಡಿನ ವಿಳಾಸದ ಜಾಡುಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದು, ಇದಕ್ಕೆ ಕರ್ನಾಟಕ ಪೊಲೀಸರ ನೆರವನ್ನೂ ಯಾಚಿಸಿದ್ದಾರೆ. ಜತೆಗೆ ಮಹಾರಷ್ಟ್ರಕ್ಕೂ ತನಿಖೆ ವಿಸ್ತರಿಸಲಾಗಿದೆ.
ಬುಧವಾರ ಮುಂಜಾನೆ 1 ಗಂಟೆಯ ವೇಳೆ ಆದೂರು ಚೆಕ್ ಪೆÇೀಸ್ಟ್‍ನಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರದ ಎ.ಬಿ.ಅಬ್ದುಲ್ಲ ಹಾಗೂ ತಂಡ ವಾಹನ ತಪಾಸಣೆಯಲ್ಲಿ ನಿರತವಾಗಿದ್ದ ಸಂದರ್ಭ ಅತಿಯಾದ ವೇಗದಲ್ಲಿ ಆಗಮಿಸಿದ ಕಾರು ನಿಲ್ಲಿಸದೇ ಪರಾರಿಯಾಗಲೆತ್ನಿಸಿದೆ. ಅಬಕಾರಿ ಅಧಿಕಾರಿಗಳು ತಮ್ಮ ವಾಹನದಲ್ಲಿ ಹಿಂಬಾಲಿಸುತ್ತಿದ್ದಂತೆ ಮುಳ್ಳೇರಿಯ-ಬದಿಯಡ್ಕ ರಸ್ತೆಯ ಬೆಳ್ಳಿಗೆಯಲ್ಲಿ ರಸ್ತೆ ಬದಿಯ ಕಾಂಕ್ರೀಟ್ ಗೋಡೆಗೆ ಕರು ಡಿಕ್ಕಿಯಗಿ ನಿಂತಿದ್ದು, ಕಾರಿನಲ್ಲಿದ್ದ ಆರೋಪಿಗಳು ಓಡಿ ಪರಾರಿಯಾಗಿದ್ದರು. ಪ್ರಕರಣ ಆದೂರು ಪೆÇೀಲೀಸರಿಗೆ ಹಸ್ತಸಂತರಿಸಲಾಯಿತು.

