ಕಾಸರಗೋಡು: ಸ್ನೇಹ ಮುಂದುವರಿಸಲು ಹಿಂದೇಟು ಹಾಕಿದ ದ್ವೇಷದಿಂದ ಪ್ರಿಯತಮ ಇರಿದು ಗಾಯಗೊಳಿಸಿದ್ದ ಯುವತಿ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಣ್ಣೂರು ಎಡಕ್ಕಾಡ್ ಕಾಟುಚ್ಚೇರಿಯಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆ ನೀಲೇಶ್ವರ ಸನಿಹದ ತೈಕಡಪ್ಪುರ ನಿವಾಸಿ, ಪ್ರಸಕ್ತ ಎಡಕ್ಕಾಡು ಕಾಟುಚ್ಚೇರಿಯಲ್ಲಿ ವಾಸಿಸುತ್ತಿರುವ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಈಕೆಯನ್ನು ಗಂಭೀರಾವಸ್ಥೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ನಗರಠಾಣೆ ವ್ಯಾಪ್ತಿಯ ಕಕ್ಕಾಡ್ ನಿವಾಸಿ ವಿನೀತ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಪರಿಚಯಗೊಂಡಿದ್ದ ಯುವತಿಯೊಂದಿಗೆ ವಿನೀತ್ ಸಲುಗೆಯಿಂದ ವರ್ತಿಸುತ್ತಿದ್ದು, ನಂತರ ಯುವತಿ ಈತನ ಸಂಪರ್ಕಕ್ಕೆ ಸಿಗದೆ ದೂರಾಗಿದ್ದಳು. ಈ ದ್ವೇಷದಿಂದ ವಿನೀತ್ ಚಾಕುವಿನೊಂದಿಗೆ ಆಕೆಯ ಮನೆಗೆ ಆಗಮಿಸಿ ಅತಿಕ್ರಮಿಸಿ ನುಗ್ಗಿ ಇರಿಯಲು ಮುಂದಾಗುತ್ತಿದ್ದಂತೆ ಯುವತಿ ತಡೆದಿದ್ದಳು. ಇದರಿಂದ ಚಾಕು ಹಣೆಗೆ ತಾಗಿ ಗಾಯಗಳುಂಟಾಗಿತ್ತು. ಅಲ್ಲದೆ ಮನೆಯೊಳಗಿನ ಪೀಠೋಪಕರಣವನ್ನೂ ವಿನೀತ್ ಹಾನಿಗೈದಿದ್ದನು. ವಿನೀತ್ ಕಿರುಕುಳದಿಂದ ಮನನೊಂದ ಯುವತಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

