ಕಾಸರಗೋಡು: ಕೇರಳ ಸರ್ಕಾರದ 'ವಿಜ್ಞಾನ ಕೇರಳಂ' ಎಂಬ ಬೃಹತ್ ಉದ್ಯೋಗ ಯೋಜನೆಯ ಅಂಗವಾಗಿ, ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ 'ಅಸಾಪ್' ವತಿಯಿಂದ ಉದ್ಯೋಗಮೇಳ ಕಾಸರಗೋಡು ಕಮ್ಯುನಿಟಿ ಸ್ಕಿಲ್ ಪಾರ್ಕ್ನಲ್ಲಿ ಏಪ್ರಿಲ್ 26 ರಂದು ಆಯೋಜಿಸಲಾಗಿದೆ.
ಪ್ರಮುಖ ಕಂಪನಿಗಳು ಭಾಗವಹಿಸುವ ಈ ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳಿಂದ ಅನೇಕ ಉದ್ಯೋಗಾವಕಾಶಗಳು ಲಭ್ಯವಿರಲಿದೆ. ಮೇಳದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಏಪ್ರಿಲ್ 26ರಂದು ಬೆಳಗ್ಗೆ 9.30 ಕ್ಕೆ ತಮ್ಮ ಬಯೋಡೇಟಾ ಮತ್ತು ಸಂಬಂಧಿತ ಪ್ರಮಾಣಪತ್ರಗಳೊಂದಿಗೆ ಕಾಸರಗೋಡು ವಿದ್ಯಾನಗರದ ಕಮ್ಯುನಿಟಿ ಸ್ಕಿಲ್ ಪಾರ್ಕ್ಗೆ ಆಗಮಿಸಬೇಕಾಗಿದೆ.
ಅಭ್ಯರ್ಥಿಗಳಿಗೆ ಈ ಅವಕಾಶವು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ https://forms.gle/D1e7oUHoADNUQdiG7 https://maps.app.goo.gl/iGaZ8VQDaWVDvbxk6 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

