ಪತ್ತನಂತಿಟ್ಟ: ಶಬರಿಮಲೆ ದೇಗುಲದಲ್ಲಿ ಪೂಜಿಸಲ್ಪಡುವ ಭಗವಾನ್ ಅಯ್ಯಪ್ಪನ ಚಿತ್ರ ಕೆತ್ತಿದ ಚಿನ್ನದ ಲಾಕೆಟ್‍ಗಳನ್ನು ವಿಷು ಹಬ್ಬದಿಂದ ವಿತರಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಪ್ರಕಟಿಸಿದೆ. ಲಾಕೆಟ್‍ಗಳ ಆನ್‍ಲೈನ್ ಬುಕಿಂಗ್ ಪ್ರಾರಂಭವಾಗಿದೆ.
ಲಾಕೆಟ್‍ಗಳು ಎರಡು ಗ್ರಾಂ, ನಾಲ್ಕು ಗ್ರಾಂ ಮತ್ತು 8 ಗ್ರಾಂ ಸೇರಿದಂತೆ ವಿವಿಧ ತೂಕಗಳಲ್ಲಿ ಲಭ್ಯವಿದೆ. ಎರಡು ಗ್ರಾಂ ಚಿನ್ನದ ಲಾಕೆಟ್ ಬೆಲೆ ರೂ. 19,300. ನಾಲ್ಕು ಗ್ರಾಂ ಚಿನ್ನದ ಲಾಕೆಟ್ ಬೆಲೆ 38,600 ರೂ.ಗಳಾಗಿದ್ದು, 8 ಗ್ರಾಂ ಚಿನ್ನದ ಲಾಕೆಟ್ ಬೆಲೆ 77,200 ರೂ.ಗಳಾಗಿದೆ.
ಭಕ್ತರು ಶಬರಿಮಲೆ ಸನ್ನಿಧಾನಂ ಆಡಳಿತ ಕಚೇರಿಯಿಂದ ಆನ್‍ಲೈನ್‍ನಲ್ಲಿ ಬುಕ್ ಮಾಡಿದ ಲಾಕೆಟ್‍ಗಳನ್ನು ಪಡೆಯಬಹುದು. ಲಾಕೆಟ್‍ಗಳನ್ನು WWW.sabarimalaonline.org ವೆಬ್‍ಸೈಟ್ ಮೂಲಕ ಬುಕ್ ಮಾಡಬಹುದು.


