ಮಂಜೇಶ್ವರ : ಬಿಜೆಪಿ ಇಂದು ಜಗತ್ತಿನ ಅತೀ ದೊಡ್ಡ ಪಕ್ಷವಾಗಿ ಬೆಳವಣಿಗೊಂಡಿದೆ. ಕಾರ್ಯಕರ್ತರು ಬಿಜೆಪಿಯ ಶಕ್ತಿ ಮತ್ತು ಜೀವಾಳ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಇಂದು ಪರಮ ವೈಭವ ಹಂತದಲ್ಲಿದೆ ಮಾತ್ರವಲ್ಲ ಜಗತ್ತು ಇಂದು ಭಾರತವನ್ನು ಸರ್ವ ವಿಧದಲ್ಲಿ ಅವಲಂಬಿಸಿದೆ. ಇದು ಪಕ್ಷದ ಅನೇಕ ಹಿರಿಯ ನೇತಾರರ ತ್ಯಾಗ ಹಾಗೂ ಸಮರ್ಪಣೆಯ ಫಲ ಎಂದು ಬಿಜೆಪಿ ಹಿರಿಯ ನೇತಾರ ವಿ ರವೀಂದ್ರನ್ ಹೇಳಿದರು.
ಹೊಸಂಗಡಿ ಪ್ರೇರಣಾದಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಯೋಜಕ ಬಾಬುರಾಜ್ ಪಕ್ಷದ ಮುಂಬರುವ ಸವಾಲುಗಳ ಬಗ್ಗೆ ವಿವರಿಸಿದರು.
ಮುಖಂಡರಾದ ಮಣಿಕಂಠ ರೈ, ಸದಾಶಿವ ಚೇರಾಲ್, ಸುರೇಶ ಭಟ್., ಯಾದವ ಬಡಾಜೆ, ಪದ್ಮನಾಭ ಕಡಪ್ಪರ, ತುಳಸಿ ಕುಮಾರಿ, ಚಂದ್ರವತಿ ಶೆಟ್ಟಿ ಬಾಯಾರು, ಪ್ರವೀಣ್ ಚಂದ್ರ ಬಲ್ಲಾಳ್, ಪ್ರಸಾದ್ ರೈ ಕಯ್ಯಾರ್, ಜಯಶಂಕರ್, ಮಾದವ ಬಲ್ಯಾಯ, ಸತ್ಯಶಂಕರ್ ಭಟ್, ಸಂತೋಷ್ ದೈಗೋಳಿ, ಆಶಾಲತಾ ಪೆಲಪ್ಪಾಡಿ, ರಕ್ಷಣ್ ಅಡಕಳ ಮೊದಲಾದವರು ಉಪಸ್ಥಿತರಿದ್ದರು. ಕೆ.ವಿ.ಭಟ್ ಸ್ವಾಗತಿಸಿ, ಲೋಕೇಶ್ ನೋಂಡ ವಂದಿಸಿದರು.

.jpg)
