ಪೆರ್ಲ: ಇತಿಹಾಸ ಪ್ರಸಿದ್ಧ ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಬುಧವಾರ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಗಣಪತಿ ಹೋಮ,ಪ್ರಾರ್ಥನೆ, ಶ್ರೀ ದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ, ತುಲಾಭಾರ ಸೇವೆ,ಮಹಾಪೂಜೆ ಜರಗಿತು. ದೇವಾಲಯದ ಆಡಳಿತ ಮೊಕ್ತೇಸರರು, ಭಕ್ತದಿಗಳು ಸೇರಿದಂತೆ ನೂರಾರು ಮಂದಿ ಪಆಲ್ಗೊಮಡಿದ್ದರು. ಐದು ದಿವಸಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.
10ರಂದು ಬೆಳಗ್ಗೆ 10ಕ್ಕೆ ದರ್ಶನಬಲಿ, ರಾತ್ರಿ ಕಟ್ಟೆಪೂಜೆ, 11ರಂದು ರಾತ್ರಿ ದೀಪೋತ್ಸವ, ಶ್ರೀದೆವರ ಭೂತಬಲಿ, ಪಡುಭಾಗಕ್ಕೆ ಸವಾರಿ, ಕಟ್ಟೆಪೂಜೆ ನಡೆಯುವುದು. 12ರಂದು ಬೆಳಗ್ಗೆ 10ಕ್ಕೆ ಶ್ರೀ ದೇವರ ಅಯ್ಯಂಗಾಯಿ ದರ್ಶನ ಬಲಿ ನಡೆಯಲಿದೆ. ರಾತ್ರಿ 9ಕ್ಕೆ ಕಟ್ಟೆಪೂಜೆ, ರಥೋತ್ಸವ, ಬೆಡಿ, ದರ್ಶನ, ಶಯನ ನಡೆಯುವುದು. 13ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ, ಹಣ್ಣುಕಾಯಿ ಸಮರ್ಪಣೆ, ಯಾತ್ರಾಹೋಮ, ಮಧ್ಯಾಹ್ನ 1.30ಕ್ಕೆ ಶ್ರೀದೇವರ ಬಲಿ ಹೊರಡುವುದು, ಕಟ್ಟೆಪೂಜೆ, ಅವಭೃತ ಸ್ನಾನಕ್ಕಾಗಿ ಕಾನಶಾಸ್ತರ ಸನ್ನಿಧಿಗೆ ಶ್ರೀದೇವರ ನಿರ್ಗಮನ, ನಂತರ ದರ್ಶನ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ರಾತ್ರಿ 8ರಿಂದ ಶ್ರೀಪಿಲಿಭೂತ ನೇಮ ನಡೆಯುವುದು.


