ತಿರುವನಂತಪುರಂ: ವಾಹನ ಚಲಾಯಿಸುವಾಗ ಪೋನ್ ಬಳಸಿದ್ದಕ್ಕಾಗಿ ಕೆಎಸ್‍ಆರ್‍ಟಿಸಿ ಸ್ವಿಫ್ಟ್ ಚಾಲಕನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ತಿರುವನಂತಪುರಂ ಕೇಂದ್ರ ಘಟಕದಲ್ಲಿ ಸ್ವಿಫ್ಟ್ ಚಾಲಕರಾಗಿರುವ ಜೆ. ಜಯೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಜಯೇಶ್ ವಾಹನ ಚಲಾಯಿಸುವಾಗ ತನ್ನ ಪೋನ್ ಬಳಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮೇ.24 ರಂದು ಕೆಎಸ್‍ಆರ್‍ಟಿಸಿ ತಿರುವನಂತಪುರಂ ಸೆಂಟ್ರಲ್ ಡಿಪೋದಿಂದ ಸುಲ್ತಾನಬತ್ತೇರಿಗೆ ಹೊರಟ ಆರ್‍ಪಿಕೆ 125 ಶಿಫ್ಟ್ ಸೂಪರ್‍ಫಾಸ್ಟ್ ಬಸ್, 25 ರ ಬೆಳಿಗ್ಗೆ ತಾಮರಸ್ಸೇರಿ ಪಾಸ್ ಮೂಲಕ ಚಾಲನೆ ಮಾಡುವಾಗ ಪೋನ್‍ನಲ್ಲಿ ಮಾತನಾಡುತ್ತಾ ಅಪಾಯಕಾರಿಯಾಗಿ ಚಾಲನೆ ಮಾಡುತ್ತಿರುವುದು ವಿಡಿಯೋ ದಾಖಲಾಗಿದೆ.
ಇದನ್ನು ಬಸ್ಸಿನಲ್ಲಿದ್ದ ಪ್ರಯಾಣಿಕನೊಬ್ಬ ಗಮನಿಸಿ ತನ್ನ ಮೊಬೈಲ್ ಪೋನ್‍ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಕೆಎಸ್‍ಆರ್‍ಟಿಸಿ ವಿಜಿಲೆನ್ಸ್ ಇಲಾಖೆಯು ಈ ವಿಷಯವನ್ನು ತುರ್ತಾಗಿ ತನಿಖೆ ನಡೆಸಿದ್ದು, ತಿರುವನಂತಪುರಂ ಕೇಂದ್ರ ಘಟಕದಲ್ಲಿ ಸ್ವಿಫ್ಟ್ ಚಾಲಕರಾಗಿರುವ ಜೆ.ಜಯೇಶ್ ನನ್ನು ಗಂಭೀರ ದುರ್ನಡತೆ ಮತ್ತು ಅತ್ಯಂತ ಬೇಜವಾಬ್ದಾರಿ ಕೃತ್ಯದ ತಪ್ಪಿತಸ್ಥರೆಂದು ಪತ್ತೆಮಾಡಿತು. ನಂತರ ಜಯೇಶ್ ಅವರನ್ನು ಅಮಾನತುಗೊಳಿಸಲಾಯಿತು.



