ಕುಂಬಳೆ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿದಾಳಿ ನಡೆಸಿದ ಸೈನಿಕರನ್ನು ಅಭಿನಂದಿಸಿ ಕುಂಬಳೆಯಲ್ಲಿ ಮಂಗಳವಾರ ತ್ರಿವರ್ಣ ಸ್ವಾಭಿಮಾನ ಯಾತ್ರೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ 25 ಮತ್ತು 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದಿನೇಶ್ ಭಟ್ ಬಾಯಾರ್ ಮತ್ತು ಶಿವರಾಮ್ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ, ಸುನಿಲ್ ಅನಂತಪುರ, ಕೆ.ಪಿ.ಅನಿಲ್ ಕುಮಾರ್, ರಾಧಾಕೃಷ್ಣ ರೈ ಮಡ್ವ, ಪ್ರೇಮಾವತಿ, ಸುಜಿತ್ ರೈ, ಶಿವಪ್ರಸಾದ್ ರೈ, ಸುಧಾಕರ ಕಾಮತ್, ವಿಶ್ವನಾಥ ನೇತೃತ್ವ ವಹಿಸಿದ್ದರು.

.jpg)
