HEALTH TIPS

ಭಯೋತ್ಪದಕರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಹೊಡೆದುರುಳಿಸುವ ಶಕ್ತಿ ಭಾರತೀಯ ಸೇನೆಗಿದೆ: ಪಡನ್ನದಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಪಿ.ಕೆ. ಕೃಷ್ಣದಾಸ್ ಅಭಿಪ್ರಾಯ

ಕಾಸರಗೋಡು: ಭಾರತ ಸರ್ಕಾರ ಮತ್ತು ಭಾರತೀಯ ಸೇನೆಗೆ ವಿಶ್ವದ ಯಾವುದೇ ಮೂಲೆಯಲ್ಲಿ ಅಡಗಿರುವ ಭಯೋತ್ಪಾದಕರನ್ನು ನಾಶಮಾಡುವ ಶಕ್ತಿಯನ್ನು ಹೊಂದಿರುವುದು  ಆಪರೇಷನ್ ಸಿಂಧೂರ್ ಮೂಲಕ ಸಾಬೀತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ತಿಳಿಸಿದ್ದಾರೆ. 

ಅವರು ಬಿಜೆಪಿ ಪಡನ್ನ ಪಂಚಾಯಿತಿ ಸಮಿತಿಗಾಗಿ ನಿರ್ಮಿಸಲಾದ ನೂತನ ಕಟ್ಟಡ 'ಮಾರಾರ್‍ಜಿ ಸ್ಮøತಿಮಂದಿರ'ಉದ್ಘಾಟಿಸಿ ಮಾತನಾಡಿದರು. ಆಪರೇಷನ್ ಸಿಂಧೂರ್ ನಮ್ಮ ಸೇನೆಯ ಸಾಮಥ್ರ್ಯದ ಪ್ರದರ್ಶನವಾಗಿದೆ. ಆದರೆ ವಿರೋಧ ಪಕ್ಷಗಳಿಗೆ ನಮ್ಮ ಮಿಲಿಟರಿ ಕ್ರಮಗಳ ಬಗ್ಗೆ ಇರುವ ಅನುಮಾನ ಇಂದಿಗೂ ದೂರಾಗದಿರುವುದು ವಿಷಾದನೀಯ.  ವಿದೇಶಗಳಿಗೆ ತೆರಳಲಿರುವ ಭಾರತೀಯ ನಿಯೋಗದ ನಾಯಕತ್ವವನ್ನು  ಶಶಿ ತರೂರ್ ಅವರಿಗೆ ನೀಡಿದಾಗ, ಅವರ ಮಾತೃ ಪಕ್ಷ ಕಾಂಗ್ರೆಸ್ ಅದನ್ನು ವಿರೋಧಿಸುವ ಮೂಲಕ ರಾಷ್ಟ್ರ ಮುಖ್ಯವಲ್ಲ, ರಾಜಕೀಯ ಮುಖ್ಯ ಎಂಬ ತನ್ನ ನಿಲುವನ್ನು ಸಾಬೀತುಪಡಿಸಿವೆ. ಜನಸಂಘದ ಕಾಲ ಹಾಗೂ ಬಿಜೆಪಿಯ ಆರಂಭಿಕ ದಿನಗಳಲ್ಲಿ ರಾಜಕೀಯ ಚಟುವಟಿಕೆ ನಡೆಸಲು ಅತ್ಯಂತ ಕಷ್ಟಕರವಾಗಿದ್ದ ಪಡನ್ನ ಪಂಚಾಯಿತಿಯಲ್ಲಿ ಬಿಜೆಪಿ ಸ್ವಂತ ಕಟ್ಟಡದಲ್ಲಿ ಕಚೇರಿ ತೆರೆದಿರುವ ಕಾರ್ಯ ಶ್ಲಾಘನೀಯ ಹಾಗೂ ಇದಕ್ಕಾಗಿ ಶ್ರಮಿಸಿದ ಇಲ್ಲಿನ ಕಾರ್ಯಕರ್ತರನ್ನು ಅಭಿನಂದಿಸುತ್ತಿರುವುದಾಗಿ ಕೃಷ್ಣದಾಸ್ ತಿಳಿಸಿದರು. 

ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಅವರು ಕಟ್ಟಡ ವಠಾರದಲ್ಲಿ ನಿರ್ಮಿಲಾದ ಸ್ವಾಮಿ ವಿವೇಕಾನಂದರ ಪೂರ್ಣ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಗತ ಸಂಘದ ಅಧ್ಯಕ್ಷ ಕೆ. ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನೀಲ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ತ್ರಿಕರಿಪುರ ಕ್ಷೇತ್ರದ ಅಧ್ಯಕ್ಷ ಟಿ.ವಿ.ಶಿಬಿನ್, ನೀಲೇಶ್ವರಂ ಮಂಡಲ ಅಧ್ಯಕ್ಷ ಸಾಗರ್ ಚಾತಮತ್,  ರಾಜ್ಯ ಸಮಿತಿ ಸದಸ್ಯ ಎಂ.ಭಾಸ್ಕರನ್, ಜಿಲ್ಲಾ ಸಮಿತಿ ಸದಸ್ಯ ಟಿ.ಕುಞÂರಾಮನ್, ತ್ರಿಕರಿಪುರ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಕೆ.ರಮೇಶನ್, ಪಿ.ಪಿ. ಪಡನ್ನ ಪಂಚಾಯಿತಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಸಿ.ವಿ. ಪದ್ಮರಾಜನ್, ತೃಕರಿಪುರ, ಮಂಡಲ ಸಮಿತಿ ಕೋಶಾಧಿಕಾರಿ ಇ.ವಿ. ಭಾಸ್ಕರನ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಟಿ.ಎಂ. ನಾರಾಯಣನ್, ಪಡನ್ನ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಅಶೋಕನ್  ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries