ಬೀಜಿಂಗ್: ಬಾಹ್ಯಾಕಾಶದಲ್ಲಿ ವಿಶ್ವದ ಮೊದಲ ಸೂಪರ್ ಕಂಪ್ಯೂಟಿಂಗ್ ಜಾಲವನ್ನು ಚೀನ ನಿರ್ಮಾಣ ಮಾಡುತ್ತಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಉಪಗ್ರಹಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ.
12 ಉಪಗ್ರಹಗಳ ಗುತ್ಛ ಈ ಕೆಲಸಗಳನ್ನು ಮಾಡಲಿದ್ದು, ಇವು ಪ್ರತಿ ಸೆಕೆಂಡ್‌ಗೆ 744 ಲಕ್ಷ ಕೋಟಿಯಷ್ಟು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.
ಇದಕ್ಕೆ ಸ್ಟಾರ್ ಕಂಪ್ಯೂಟರ್ ಎಂದು ಹೆಸರಿಡಲಾಗಿದ್ದು, 2800 ಉಪಗ್ರಹಗಳ ನೆರವಿನೊಂದಿಗೆ ಇದನ್ನು ನಿರ್ವಹಿಸಲಾಗುತ್ತದೆ. ಇದರಲ್ಲಿ ಪ್ರತಿ ಸೆಕೆಂಡ್‌ಗೆ 100 ಗಿಗಾ ಬೈಟ್‌ನಷ್ಟು ಮಾಹಿತಿ ವರ್ಗಾವಣೆ ಮಾಡಬಹುದಾಗಿದೆ ಎಂದು ಚೀನ ಹೇಳಿದೆ.

