ಕಾಸರಗೋಡು: 11 ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ, ತ್ರಿಕರಿಪುರದ ಸರ್ಕಾರಿ ಹೋಮಿಯೋ ಔಷಧಾಲಯವು ತ್ರಿಕರಿಪುರ ಪಂಚಾಯತ್‍ನ ಹಸಿರು ಕ್ರಿಯಾಸೇನೆ ಸದಸ್ಯರಿಗೆ ಯೋಗ ತರಬೇತಿ ಮತ್ತು ಜಾಗೃತಿ ತರಗತಿಗಳನ್ನು ನಡೆಸಿತು.
ತ್ರಿಕರಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇ.ಎಂ. ಆನಂದವಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ತ್ರಿಕರಿಪುರ ಪಂಚಾಯತ್ ಅಧ್ಯಕ್ಷ ವಿ.ಕೆ. ಬಾವ ಉದ್ಘಾಟಿಸಿದರು. ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಶಂಸುದ್ದೀನ್ ಆಯಿಟಿ, ವಾರ್ಡ್ ಸದಸ್ಯ ಫೈಜ್ ಬೀರಿಚೇರಿ, ವಿಇಒ ಪ್ರಸೂನ್, ಆರೋಗ್ಯ ನಿರೀಕ್ಷಕಿ ಸುಪ್ರಿಯಾ ಸಮಾರಂಭದಲ್ಲಿ ಭಾಗವಹಿಸಿದ್ದರು. ವೈದ್ಯಾಧಿಕಾರಿ ಡಾ. ಸುಜಯ ನಾಯರ್ ಸ್ವಾಗತಿಸಿ, ವಾರ್ಡ್ ಸದಸ್ಯ ಇ. ಶಶಿಧರನ್ ವಂದಿಸಿದರು. ಯೋಗ ಬೋಧಕಿ ಡಾ. ದಿವ್ಯಾ ಪಿ.ವಿ. ಯೋಗ ಜಾಗೃತಿ ತರಗತಿ ಮತ್ತು ತರಬೇತಿಯನ್ನು ನಡೆಸಿದರು.


