ಬದಿಯಡ್ಕ: 'ಜೀವನದಲ್ಲಿ ಉನ್ನತ ಯಶಸ್ಸನ್ನು ಗಳಿಸಿ ನಮ್ಮ ಅಗತ್ಯಗಳನ್ನು ಪೂರೈಸಬೇಕಾದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಯಾವುದೇ ದುವ್ರ್ಯಸನಗಳಿಗೆ ದಾಸರಾಗದೆ ಸ್ವಯಂಶಿಸ್ತನ್ನು ಪಾಲಿಸಬೇಕಾದ ಅಗತ್ಯವಿದೆ' ಎಂದು ಕುಂಬ್ದಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ನಡೆದ ಪ್ಲಸ್ ವನ್ ಪ್ರವೇಶೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷ ರಾಜಾರಾಮ ಭಟ್ ಮಿತ್ತೂರು ವಹಿಸಿದ್ದರು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು ಹಾಗೂ ಪಿಟಿಎ ಉಪಾಧ್ಯಕ್ಷೆ ಪ್ರಮೀಳಾ ಗೋಸಾಡ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಕಳೆದ ಪ್ಲಸ್ ಟು ಪರೀಕ್ಷೆಯಲ್ಲಿ ಅತಿ ವಿಶಿಷ್ಟ ಸಾಧನೆ ಮಾಡಿದ ಮೂವತ್ತೆರಡು ಮಂದಿ ವಿದ್ಯಾರ್ಥಿಗಳಿಗೆ ಸ್ಟಾಫ್ ಕೌನ್ಸಿಲ್ ಹಾಗೂ ಪಿಟಿಎ ವತಿಯಿಂದ ಸ್ಮರಣೆಕೆ ನೀಡಿ ಪುರಸ್ಕರಿಸಲಾಯಿತು. ಜೊತೆಗೆ ಬಾಲಗೋಪಾಲ ಶರ್ಮ ಉಪ್ಪಂಗಳ, ಉಪ್ಪಂಗಳ ಟ್ರಸ್ಟ್ ಹಾಗೂ ರಕ್ಷಾ ಆರ್ಸಿಸಿಯ ವಿಠಲರಾಜ ಇವರು ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುವ ನಗದು ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಸೇನಾನಿ ಹಾಗೂ ಉದ್ಯಮಿ ಬಾಲಚಂದ್ರ ಕೇಕುಣ್ಣಾಯ ಅವರು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಾವು ನೀಡುವ ಬಹುಮಾನವನ್ನು ವಿತರಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಗಿರೀಶ ಎನ್, ಸ್ಟಾಫ್ ಕೌನ್ಸಿಲ್ ಕಾರ್ಯದರ್ಶಿ ಗಣೇಶ ಪಿಎಸ್ ಶುಭ ಹಾರೈಸಿದರು. ಪ್ರಾಂಶುಪಾಲ ಸತೀಶ ವೈ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಧ್ಯಾಪಕ ಶಿಬು ಪಿ.ವಿ. ವಂದಿಸಿದರು. ಅಧ್ಯಾಪಕ ಬಾಲಚಂದ್ರನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರು, ವಿದ್ಯಾರ್ಥಿಗಳು, ರಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

.jpg)
.jpg)
.jpg)
